ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಯಾದಗಿರಿ: ಇಂದು ಬೆಳಿಗ್ಗೆಯಿಂದ ಜಿಲ್ಲಾದ್ಯಂತ ರಣಭೀಕರವಾಗಿ ಮಳೆಯಾಗುತ್ತಿದ್ದು ನೂರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಚಾಮನಾಳ ಗ್ರಾಮದಲ್ಲಿ 25 ಎಕರೆ ಭತ್ತ ನಾಟಿ ಮಾಡಿದ ಜಮೀನಲ್ಲಿ ಮಳೆನೀರು ನುಗ್ಗಿ ಕೊಚ್ಚಿಕೊಂಡು ಹೋಗಿ ಅನ್ನದಾತನು ಕಣ್ಣೀರು ಹಾಕುವಂತಾಗಿದೆ.
ಜಿಲ್ಲೆಯಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಯಾವ ರಸ್ತೆಯಲ್ಲಿ ನೋಡಿದ್ರು ಮಳೆ ನೀರು ಆವರಿಸುವ ದೃಶ್ಯಗಳು ಕಾಣಿಸುತ್ತಿವೆ. ಯಾದಗಿರಿ ನಗರದ ಸುಭಾಷ್ ಸರ್ಕಲ್ ಬಳಿ ಪಾರ್ಕಿಂಗ್ ಬಳಿ ನಿಲ್ಲಿಸಿದ ಬೈಕ್ಗಳ ಇಂಜಿನ ವರೆಗೆ ನೀರು ಆವರಿಸಿವೆ, ಅದೇ ರೀತಿ ಶಹಾಪುರ ನಗರದ ಬಸವೇಶ್ವರ ಸರ್ಕಲ್ ಸುತ್ತಲೂ ನೀರು ಆವರಿಸಿ ನಡುಗಡ್ಡೆಯಾದಂತೆ ಕಾಣಿಸುತ್ತಿದೆ.
ಇನ್ನೂ ಸುರಪುರ, ಗುರಮಠಕಲ್ ತಾಲೂಕಿನ ಹಲವು ಭಾಗದಲ್ಲಿ ಭಾರೀ ಮಳೆಯಾಗಿದೆ. ಇನ್ನೂ ಕೆಲವು ಕಡೆ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಂಜು ಮುಸಿಕಿದ ಮೊಡವಿರುವ ವಾತವರಣ ಆವರಿಸಿಕೊಂಡಿದೆ.
Comments (0)