- ಮುಖ್ಯ ಮಾಹಿತಿ
- ರಾಜಕೀಯ
- ರಾಜ್ಯ
- Like this post: 0
ಐಟಿ ವಿಚಾರಣೆ ಬಳಿಕ ಮೊದಲ ಬಾರಿಗೆ ಭಾವುಕರಾದ ಡಿಕೆಶಿ!
- by Suddi Team
- January 4, 2019
- 452 Views

ಬೆಂಗಳೂರು: ನಾನು ನ್ಯಾಯ ಬದ್ಧವಾಗಿ ದುಡಿದು ಸಂಪಾದಿಸಿದ್ದೇನೆ. ಎಲ್ಲ ಹಂತದಲ್ಲೂ ಕಾನೂನು ಬದ್ಧವಾಗಿ ನಡೆದುಕೊಂಡಿದ್ದೇನೆ. ಕಾನೂನಿನ ಮೇಲೆ ನನಗೆ ಗೌರವವಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ. ಆದ್ರೆ, ಆರು ಗಂಟೆಗಳ ಕಾಲ ನನ್ನ ವಯಸ್ಸಾದ ತಾಯಿಯನ್ನು ಕೂರಿಸಿ ವಿಚಾರಣೆ ಮಾಡಿದ್ದು ಬಹಳ ನೋವು ತಂದಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಭಾವುಕರಾದರು.
ನಮ್ಮ ತಾಯಿ, ನನ್ನ ತಮ್ಮ ಮತ್ತು ನಾನು ಮನೆಯಲ್ಲಿ ಇಲ್ಲದ ಕಾರಣ ಐಟಿ ಅಧಿಕಾರಿಗಳು ನಮ್ಮ ಮನೆಗೆ ಹೋಗಿ ನೋಟೀಸ್ ಅಂಟಿಸಿ ಬಂದಿದ್ದರು. ನೋಟೀಸ್ಗೆ ಗೌರವ ನೀಡುವ ಉದ್ದೇಶದಿಂದ ನಮ್ಮ ತಾಯಿಯನ್ನು ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದೆ. ನನ್ನ ತಾಯಿಗೆ 80 ವರ್ಷ ವಯಸ್ಸಾಗಿರುವುದರಿಂದ ಅವರಿಗೆ ನೆರವಾಗಲು ಐಟಿ ಅಧಿಕಾರಿಗಳು ನನಗೂ ಅವಕಾಶ ನೀಡಿದರು. ಐಟಿ ಅಧಿಕಾರಿಗಳು ನಮ್ಮೊಂದಿಗೆ ಗೌರವದಿಂದ ನಡೆದುಕೊಂಡಿದ್ದಾರೆ ಎಂದರು.
ಪುನೀತ್ ನಮ ಪಕ್ಕದ ಮನೆಯವರು. ಬೆಳಿಗ್ಗೆ ಎದ್ದ ತಕ್ಷಣ ಅವರ ಮುಖ ನೋಡಬೇಕು. ಐಟಿ ದಾಳಿ ಮುಗಿತೇನೋ ಅಂತಾ ನೋಡೋಣ, ಮಾತಾಡೋಣ ಅಂತಾ ಹೋಗಿದ್ದೆ. ಇನ್ನೂ ನಡೀತಿದೆ ಅಂತಾ ಹೇಳಿದ್ರು. ಹೀಗಾಗಿ ವಾಪಸ್ ಬಂದೆ.
Related Articles
Thank you for your comment. It is awaiting moderation.
Comments (0)