ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ತುಮಕೂರು: ಎಸ್ ಎಸ್ ಎಲ್ ಸಿ ಪರೀಕ್ಷಾ ಮೇಲ್ವಿಚಾರಕನಿಗೆ ಕರೋನಾ ಪಾಸಿಟಿವ್ ದೃಢಪಟ್ಟಿದ್ದು, ಇದೀಗ ಪಾವಗಡ ತಾಲೂಕಿನ ಅರಸೀಕೆರೆ ಪ್ರೌಢಶಾಲೆಯ ಮಕ್ಕಳಲ್ಲಿ ಆತಂಕ ಮನೆ ಮಾಡಿದೆ.
ಪರೀಕ್ಷಾ ಕೇಂದ್ರ ಒಟ್ಟು 132 ವಿದ್ಯಾರ್ಥಿಗಳಲ್ಲಿ 125 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪ್ರತಿ ವಿದ್ಯಾರ್ಥಿಯನ್ನು ಮಾತನಾಡಿಸಿಯೇ ಮೇಲ್ವಿಚಾರಕರು ಒಳಗಡೆ ಕಳಿಸಿದ್ದರು. ಜೂನ್ 22 ರಂದೇ ಕೋವಿಡ್ 19 ಟೆಸ್ಟ್ ಗೆ ಕೊಟ್ಟಿದ್ದ ಎಸ್ ಎಸ್ ಎಲ್ ಸಿ ಪರೀಕ್ಷಾ ಮೇಲ್ವಿಚಾರಕ ವರದಿಗೂ ಮುನ್ನವೇ ಕೆಲಸಕ್ಕೆ ಹಾಜರಾಗಿ ಮಹಾ ಎಡವಟ್ಟು ಎಸಗಿದ್ದಾರೆ. ಅಲ್ಲದೆ ಕರ್ತವ್ಯದ ವೇಳೆ ಸಿಬ್ಬಂದಿ ಜೊತೆಗೆ ಊಟವನ್ನು ಮಾಡಿದ್ದಾರೆ.
ಸದ್ಯ ಪರೀಕ್ಷಾ ಕೇಂದ್ರ ಮತ್ತು ಸಿಬ್ಬಂದಿಗಳನ್ನ ಬದಲಾಯಿಸುವುದಾಗಿ ಡಿಡಿಪಿಇ ರೇವಣ್ಣಸಿದ್ದಪ್ಪ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಬದಲಾವಣೆ ಬಳಿಕ 125 ವಿದ್ಯಾರ್ಥಿಗಳನ್ನ ಕೋವಿಡ್ ಟೆಸ್ಟ್ ಗೆ ಒಳಪಡಿಸುವ ಸಾಧ್ಯತೆ ಇದೆ.
Comments (0)