ಆಯುಷ್ ವೈದ್ಯರ ಸಾಮೂಹಿಕ ರಾಜೀನಾಮೆ!
- by Suddi Team
- July 15, 2020
- 50 Views

ರಾಯಚೂರು: ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ನೌಕರರನ್ನು ಖಾಯಂ ನೌಕರರ ಪಟ್ಟಿಗೆ ಸೇರಿಸಿ ಕನಿಷ್ಠ ವೇತನ ಪಾವತಿಸುವಂತೆ ಒತ್ತಾಯಿಸಿ, ರಾಯಚೂರಿನ 70 ಆಯುಷ್ ವೈದ್ಯರು ಸಿಎಂ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಳೆದ 15 ವರ್ಷಗಳಿಂದ ಹೆಚ್ಚು ಕಡಿಮೆ 20 ಸಾವಿರ ರೂಪಾಯಿಗಳಿಗೆ ದುಡಿಯುತ್ತಿರುವ ಆಯುಷ್ ವೈದ್ಯರು ಕೊರೋನಾ ತುರ್ತು ಸಂದರ್ಭದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ. ಕೊರೋನಾ ವಾರಿಯರ್ಸ್ ಆಗಿ ಐಸೊಲೇಷನ್ ವಾರ್ಡ್, ಚೆಕ್ಪೋಸ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಡಿಮೆ ವೇತನದಿಂದ ನಮ್ಮ ಸಂಸಾರ ನಡೆಸಲು ಸದ್ಯಕ್ಕೆ ಆಗುತ್ತಿಲ್ಲ ಅದ್ರಲ್ಲೂ ಆಯುಷ್ ನೌಕರರಾದ ನಮಗೆ ಯಾವುದೇ ಆರೋಗ್ಯ ವಿಮೆಗಳಿಲ್ಲ ಎಂದು ಆಯುಷ್ ವೈದ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ರಾಯಚೂರಿನ PHC 36, RBSK 24 , WPHC 10 ಸಿಬ್ಬಂದಿಗಳು ಸೇರಿದಂತೆ ಒಟ್ಟು 70 ಆಯುರ್ವೇದ ವೈದ್ಯರು ಸೇರಿದಂತೆ ರಾಜ್ಯದ 2000 ಜನ ಆಯುರ್ವೇದ ವೈದ್ಯರು ಈಗಾಗಲೇ ಸಿಎಂ ಅವರಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒಂದು ವಾರದ ಹಿಂದೆ ಮನವಿ ಸಲ್ಲಿಸಿ, ಕಪ್ಪು ಬಟ್ಟೆ ಕಟ್ಟಿಕೊಂಡು ಸೇವೆ ಸಲ್ಲಿಸಿದರೂ, ಸರ್ಕಾರ ಮಾತ್ರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇರುವುದರಿಂದ ಮನನೊಂದು ಇಂದು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿದ್ದಾರೆ. ರಾಜ್ಯಾದ್ಯಂತ 2000 ಜನ ಆಯುಷ್ ವೈದ್ಯರು ರಾಜೀನಾಮೆ ಸಲ್ಲಿದ್ದಾರೆ.
Related Articles
Thank you for your comment. It is awaiting moderation.
Comments (0)