ರಾಜ್ಯದಲ್ಲಿ ಇಂದು ದಾಖಲೆಯ 4169 ಕರೋನಾ ಕೇಸ್: 51422 ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷೆ ಮೀರಿ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು ಇಂದು ದಾಖಲೆಯ 4169 ಹೊಸ ನೋವೆಲ್ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ,104 ಸೋಂಕಿತರು ಒಂದೇ ದಿನ ಮೃತರಾಗುವ ಮೂಲಕ ರಾಜ್ಯದಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಸಧ್ಯ 30655 ಆಕ್ಟೀವ್ ಕೇಸ್ ಗಳಿದ್ದು, ಸೋಂಕಿತರ ಸಂಖ್ಯೆ 51422 ಕ್ಕೆ ತಲುಪಿದೆ.1032 ಸೋಂಕಿತರು ಈವರೆಗೆ ಮೃತರಾಗಿದ್ದಾರೆ. 539 ಸೋಂಕಿತರು ಯುಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು‌1263 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದವರ ಸಂಖ್ಯೆ 19729 ಆಗಿದೆ.

ಲಾಕ್‌ಡೌನ್ ಜಾರಿಯಾಗಿದ್ದರೂ ಬೆಂಗಳೂರಿನಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ ಇಂದು ಒಂದೇ ದಿನ ನಗರದಲ್ಲಿ 2344 ಸೋಂಕಿತರು ಪತ್ತೆಯಾಗಿದ್ದಾರೆ, ಅರ್ಧಕ್ಕಿಂತ ಜಾಸ್ತಿ ಬೆಂಗಳೂರಲ್ಲೇ ಸೋಂಕಿತರು ಪತ್ತೆಯಾಗುತ್ತಿರುವುದು ಹೊಸ ಆತಂಕ ಸೃಷ್ಟಿಸಿದೆ.

ಜಿಲ್ಲಾವಾರು ಕೋವಿಡ್ ವಿವರ:

Related Articles

Comments (0)

Leave a Comment