ಮಹಾಭಿಯೋಗದ ಒತ್ತಡದಲ್ಲಿ ಇಂಡೋನೇಷ್ಯಾ ಉಪಾಧ್ಯಕ್ಷ ಗಿಬ್ರಾನ್ ರಾಜೀನಾಮೆ?
- by Suddi Loka
- November 12, 2026
- 7 Views
ಜಕಾರ್ತಾ: ಇಂಡೋನೇಷ್ಯಾದ ಉಪಾಧ್ಯಕ್ಷ ಗಿಬ್ರಾನ್ ರಕಬುಮಿಂಗ್ ರಾಕಾ ಅವರು ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ಆದರೆ ಈ ಬೆಳವಣಿಗೆಯ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಮಾಜಿ ಅಧ್ಯಕ್ಷ ಜೋಕೊ ವಿಡೋಡೊ ಅವರ ಪುತ್ರರಾಗಿರುವ ಗಿಬ್ರಾನ್, ತಮ್ಮ ಶೈಕ್ಷಣಿಕ ಅರ್ಹತೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅಗತ್ಯವಿರುವ ಕಾನೂನುಬದ್ಧ ಅರ್ಹತೆಗಳ ಕುರಿತು ವಿವಾದ ಎದುರಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸುಮಾರು 120 ಶಾಸಕರು ಅವರ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಲು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಅವರ ರಾಜಕೀಯ ಭವಿಷ್ಯದ ಕುರಿತು ಚರ್ಚೆಗಳು ತೀವ್ರಗೊಂಡಿವೆ.
ಈ ಬೆಳವಣಿಗೆಯು ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಮತ್ತು ಮಾಜಿ ಅಧ್ಯಕ್ಷ ಜೋಕೊ ವಿಡೋಡೊ ನಡುವಿನ ರಾಜಕೀಯ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು ಎಂಬ ಚರ್ಚೆ ಆರಂಭವಾಗಿದೆ.


Comments (0)