ಹೊದೈದಾ ಮೇಲೆ ಸೌದಿ ಯುದ್ಧವಿಮಾನಗಳಿಂದ ವೈಮಾನಿಕ ದಾಳಿ
- by Suddi Loka
- November 22, 2026
- 10 Views
ಸನಾ: ಯೆಮನ್‌ನ ಕೆಂಪು ಸಮುದ್ರ ತೀರದ ಹೊದೈದಾ ಬಂದರು ನಗರದ ಮೇಲೆ ಶನಿವಾರ ಸಂಜೆ ಸೌದಿ ಯುದ್ಧವಿಮಾನಗಳು ಸರಣಿ ವೈಮಾನಿಕ ದಾಳಿ ನಡೆಸಿವೆ. ಹೌತಿ ನಿಯಂತ್ರಿತ ಅಲ್-ಮಸೀರಾ ಟಿವಿ ದಾಳಿಯನ್ನು ‘ಸೌದಿ ಆಕ್ರಮಣ’ ಎಂದು ವರದಿ ಮಾಡಿದೆ. ಸಾವು-ನೋವು ಹಾಗೂ ಹಾನಿಯ ವಿವರ ಲಭ್ಯವಾಗಿಲ್ಲ. ನಗರದಲ್ಲಿ ಐದಕ್ಕೂ ಹೆಚ್ಚು ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಯೆಮನ್‌ನ ಎಂಟು ಪ್ರಾಂತ್ಯಗಳಲ್ಲಿ 71 ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳು ನಡೆದಿವೆ ಎಂದು ಹೌತಿ ಸೇನಾ ವಕ್ತಾರ ಯಾಹ್ಯಾ ಸರೇಯಾ ಆರೋಪಿಸಿದ್ದಾರೆ. ಈ ದಾಳಿಗಳಲ್ಲಿ ಸಾವು-ನೋವು ಸಂಭವಿಸಿದೆ ಎಂದೂ ತಿಳಿಸಿದ್ದಾರೆ.

ಇನ್ನೊಂದೆಡೆ, ರಿಯಾದ್ ಕಡೆಗೆ ಉಡಾಯಿಸಲಾದ ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಎರಡು ಡ್ರೋನ್‌ಗಳನ್ನು ತಡೆದು ನಾಶಪಡಿಸಿರುವುದಾಗಿ ಸೌದಿ ನೇತೃತ್ವದ ಮೈತ್ರಿಕೂಟ ಹೇಳಿದೆ.
ಹೌತಿಗಳು ಮತ್ತು ಯೆಮನ್ ಸರ್ಕಾರದ ಪಡೆಗಳ ನಡುವಿನ ಸಂಘರ್ಷ ತೀವ್ರಗೊಂಡಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. 2014ರಲ್ಲಿ ಹೌತಿಗಳು ಸನಾ ವಶಪಡಿಸಿಕೊಂಡ ಬಳಿಕ ಸಂಘರ್ಷ ಆರಂಭವಾಗಿದ್ದು, 2015ರಲ್ಲಿ ಸೌದಿ ನೇತೃತ್ವದ ಮೈತ್ರಿಕೂಟ ಯೆಮನ್ ಸರ್ಕಾರದ ಬೆಂಬಲಕ್ಕೆ ಸೇನಾ ಹಸ್ತಕ್ಷೇಪ ನಡೆಸಿತ್ತು.


Comments (0)