ಯುಜಿಸಿಇಟಿ: ವೆರಿಫಿಕೇಷನ್ ಸ್ಲಿಪ್ ಬಿಡುಗಡೆ ಮಾಡಿದ ಕೆಇಎ
- by Suddi Team
- June 23, 2025
- 121 Views
ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದರ ಭಾಗವಾಗಿ ಸೋಮವಾರ ಪರಿಶೀಲನಾ ಚೀಟಿ (ವೆರಿಫಿಕೇಷನ್ ಸ್ಲಿಪ್) ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ತಮ್ಮ ಅರ್ಜಿ ಭರ್ತಿ ಮಾಡುವಾಗ ಮೀಸಲಾತಿ ಇತ್ಯಾದಿ ಕ್ಲೇಮ್ಗಳನ್ನು ಮಾಡಿಕೊಂಡಿರುತ್ತಾರೆ. ಅವೆಲ್ಲವೂ ಈ ಚೀಟಿಯಲ್ಲಿ ಉಲ್ಲೇಖವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಈ ಚೀಟಿಯಲ್ಲಿನ ಕ್ಲೇಮ್ ಪ್ರಕಾರವೇ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಕ್ಲೇಮ್ ಮಾಡಿರುವುದರಲ್ಲಿ ತಪ್ಪಾಗಿದ್ದಲ್ಲಿ ಸರಿ ಮಾಡಿಕೊಳ್ಳಲು ಸದ್ಯದಲ್ಲೇ ದಿನಾಂಕ ನಿಗದಿ ಮಾಡಲಾಗುವುದು. ಆಗ ಮುಂಗಡವಾಗಿ ದಿನಾಂಕವನ್ನು ನಿಗದಿ ಮಾಡಿಕೊಂಡೇ ಕೆಇಎಗೆ ಬಂದು ಸರಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
Related Articles
Thank you for your comment. It is awaiting moderation.


Comments (0)