Video-ಫೆ.6 ರಂದು ಪರೀಕ್ಷಾ ಪೆ ಚರ್ಚಾದಲ್ಲಿ ಪ್ರಧಾನಿ ಮೋದಿ ಭಾಗಿ
- by Suddi Team
- February 4, 2026
- 12 Views
ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ನಡೆಸುವ ಸಂವಾದದ 9ನೇ ಆವೃತ್ತಿಯಾದ ‘ಪರೀಕ್ಷಾ ಪೇ ಚರ್ಚಾ 2026’ ಫೆಬ್ರವರಿ 6 ರಂದು ನಡೆಯಲಿದೆ. ಇದರ ಅಫೀಷಿಯಲ್ ಪ್ರೋಮೋ ಬಿಡುಗಡೆಯಾಗಿದೆ.
ಕಾರ್ಯಕ್ರಮವು ಫೆಬ್ರವರಿ 6, 2026 ರಂದು ಬೆಳಿಗ್ಗೆ 10:00 ಗಂಟೆಗೆ ಪ್ರಸಾರವಾಗಲಿದೆ. ಈ ಬಾರಿಯ ಚರ್ಚೆಯು ಹೊಸ ಸ್ವರೂಪದಲ್ಲಿರಲಿದ್ದು, ಪ್ರಧಾನಿಯವರು ದೆಹಲಿಯ 7, ಲೋಕ ಕಲ್ಯಾಣ ಮಾರ್ಗ ಸೇರಿದಂತೆ ದೇವಮೋಗ್ರಾ, ಕೊಯಮತ್ತೂರು, ರಾಯ್ಪುರ ಮತ್ತು ಗುವಾಹಟಿಯ ‘ಎಕ್ಸಾಮ್ ವಾರಿಯರ್ಸ್’ ಜೊತೆ ಈಗಾಗಲೇ ಸಂವಾದ ನಡೆಸಿದ್ದಾರೆ. ಈ ವರ್ಷದ ಕಾರ್ಯಕ್ರಮಕ್ಕೆ ದಾಖಲೆಯ 6.76 ಕೋಟಿಗೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 4.19 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದಾರೆ.
ಈ ಸಂಚಿಕೆಯನ್ನು MyGov.in, ದೂರದರ್ಶನ, ಆಲ್ ಇಂಡಿಯಾ ರೇಡಿಯೋ ಮತ್ತು ಅಧಿಕೃತ ಯೂಟ್ಯೂಬ್ ಚಾನೆಲ್ಗಳಲ್ಲಿ ಲೈವ್ ಆಗಿ ವೀಕ್ಷಿಸಬಹುದು.
ಎಕ್ಸ್ ತಾಣದ ತಮ್ಮ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
“ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ #ParikshaPeCharcha ಕೂಡ ಮರಳಿದೆ! ಈ ಬಾರಿ, ದೇವಮೋಗ್ರ, ಕೊಯಮತ್ತೂರು, ರಾಯ್ಪುರ, ಗುವಾಹಟಿಯಲ್ಲಿ ಮತ್ತು ದೆಹಲಿಯ 7, ಲೋಕ ಕಲ್ಯಾಣ್ ಮಾರ್ಗದಲ್ಲಿ #ExamWarriors ಗಳ ಜೊತೆಗೆ ಚರ್ಚಾ ಕಾರ್ಯಕ್ರಮ ನಡೆಯಿತು. ಪ್ರತಿಬಾರಿಯಂತೆ, ನನ್ನ ಯುವ ಸ್ನೇಹಿತರೊಂದಿಗೆ ಸಂವಹನ ನಡೆಸುವುದು ಮತ್ತು ಒತ್ತಡ ರಹಿತ ಪರೀಕ್ಷೆಗಳು ಹಾಗೂ ಹಲವಾರು ಇತರ ವಿಷಯಗಳನ್ನು ಚರ್ಚಿಸುವುದು ಉಲ್ಲಾಸಕರವಾಗಿದೆ.”ಎಂದು ಮೋದಿ ತಿಳಿಸಿದ್ದಾರೆ.
Related Articles
Thank you for your comment. It is awaiting moderation.


Comments (0)