ಹಿಂದುಸ್ತಾನಿ ಗಾಯಕ ದಿ. ಷಣ್ಮುಖಾನಂದ ಗೊಜನೂರ ಸ್ಮರಣಾರ್ಥ ಕನ್ನಡ ಗೀತಗಾಯನ ಸ್ಪರ್ಧೆ

ಧಾರವಾಡ : ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಗೆ ಸಂಲಗ್ನಗೊಂಡಿರುವ ಡಾ. ಎಚ್. ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ, ಶಹರ ವಲಯದ ಬಿಇಓ ಕಚೇರಿ ಹಾಗೂ ಶ್ರೀ ಸಿದ್ದರಾಮೇಶ್ವರ ಬಿ.ಇಡಿ. ಕಾಲೇಜು ಜಂಟಿ ಆಶ್ರಯದಲ್ಲಿ ಹಿಂದುಸ್ತಾನಿ ಗಾಯಕ ದಿವಂಗತ ಷಣ್ಮುಖಾನಂದ ಗೊಸನೂರ ಸ್ಮರಣಾರ್ಥ ಕನ್ನಡ ಗೀತ ಗಾಯನ ಸ್ಪರ್ಧೆ ಶನಿವಾರ (ನ.22 ರಂದು) ಜರುಗಲಿದೆ.

ಸಿದ್ದರಾಮೇಶ್ವರ ಬಿ.ಇಡಿ. ಕಾಲೇಜಿನ ಮಜ್ಜಿಗೆ ಪಂಚಪ್ಪ ಸಭಾಭವನದಲ್ಲಿ ಮುಂಜಾನೆ 10 ಗಂಟೆಗೆ ಪೊಲೀಸ್ ಇನ್ಸ್ ಪೆಕ್ಟರ್ ಮಹಾಂತೇಶ ಗುಡಿಹಾಳ ಉದ್ಘಾಟಿಸುವರು. ಬಿ.ಇಡಿ. ಕಾಲೇಜು ಪ್ರಿನ್ಸಿಪಾಲ್ ಡಾ. ಗಿರಿಜಾ ಹಿರೇಮಠ ಅಧ್ಯಕ್ಷತೆವಹಿಸಲಿದ್ದು, ಸಂಗೀತ ಉಪನ್ಯಾಸಕಿ ಡಾ. ಅರ್ಚನಾ ಸುತಾರ, ಸಂಪನ್ಮೂಲ ವ್ಯಕ್ತಿ ಅರುಂಧತಿ ಸವದತ್ತಿ, ದತ್ತಿದಾನಿಗಳಾದ ಅನ್ನಪೂರ್ಣ ಗೊಜನೂರ, ವಿನಯಾ ಗೊಜನೂರ ಅವರು ಪಾಲ್ಗೊಳ್ಳುವರು.

ಖ್ಯಾತ ಹಿಂದುಸ್ತಾನಿ ಸಂಗೀತಗಾರರಾಗಿದ್ದ ಪಂಡಿತ ಬಸವರಾಜ ರಾಜಗುರು ಅವರ ಶಿಷ್ಯರಾಗಿದ್ದ ಷಣ್ಮುಖಾನಂದ ಗೊಜನೂರ ಅವರು ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿದ್ದು, ತಮ್ಮ  ಉತ್ತಮ ಹಾಡುಗಾರಿಕೆಯಿಂದ ಪ್ರಶಂಸೆಗೆ ಪಾತ್ರವಾಗಿದ್ದರು. ತಮ್ಮ ಗುರುಗಳಾದ ಪಂಡಿತ ಬಸವರಾಜ ರಾಜಗುರು ಅವರ ಸಂಗೀತ ಕಚೇರಿಗಳಲ್ಲಿ ಪಾಲ್ಗೊಂಡು ಸಾಥ ನೀಡಿದ್ದರು.

Related Articles

Comments (0)

Leave a Comment