ಎಲ್‌ಕೆಜಿ-ಯುಕೆಜಿ ಮಕ್ಕಳಿಗೆ ನಡೆದ ಚಿತ್ರಕಲಾ ಸ್ಪರ್ಧೆ

ಧಾರವಾಡ : ಇಲ್ಲಿಯ ಕ್ಲಾಸಿಕ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ(ಎಲ್.ಕೆ.ಜಿ-ಯುಕೆಜಿ) ವಿಭಾಗದ ಚಿಣ್ಣರ ಸೃಜನಶೀಲ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಲೈಫ್ ಇನ್ಸೂರನ್ಸ್ ಶಾಖೆಯ ವತಿಯಿಂದ ಜರುಗಿದ ಬಣ್ಣಗಳನ್ನು ಗುರುತಿಸುವಿಕೆಯ ಚಿತ್ರಕಲಾ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಎಲ್.ಕೆ.ಜಿ ಮತ್ತು ಯು.ಕೆ.ಜಿ. ವಿಭಾಗದ ಮಕ್ಕಳು ಬಹಳಷ್ಟು ಆಸಕ್ತಿಯಿಂದ ಉತ್ತಮವಾಗಿ ಬಣ್ಣಗಳನ್ನು ಗುರುತಿಸಿ ಆಕರಣೆ ಮಾಡಿದ್ದು, ಬಹುಮಾನ ಪಡೆದ ಮಕ್ಕಳ ಹೆಸರುಗಳು ಇಂತಿವೆ. ಕು. ಶ್ರೀಪ್ರಿಯಾ ಯರಗಂಬಳಿಮಠ, ಕು. ಮಿರಹಕೊನೈನ್ ನದಾಫ್, ಕು. ಪ್ರಣಮ್ ಕುಲಕರ್ಣಿ, ಕು. ಸಾತ್ವಿಕ್ ಗುದಗಿ, ಕು. ಧ್ವನಿ ರೋಣದ, ಕು. ಜೀವಾ ಗೊರಗದ್ದಿ, ಕು. ಸಿರಿ ಹೂಗಾರ, ಕು. ಮಿರಹ ಗರಗ, ಕು. ಸಂಭ್ರಮ ಪಾಟೀಲ, ಕು. ಸಂಯುಕ್ತಾ ಕರಿಕಟ್ಟಿ, ಕು. ಲಕ್ಷ್ಮಣ ಗಾಣಿಗೇರ, ಕು. ಆಲಾಪ ಶೆಟ್ಟಿ ಹಾಗೂ ಕು. ನಿಹಾಲ ಮಿಠಾರೆ.

ಎಸ್.ಬಿ.ಐ. ಲೈಫ್ ಇನ್ಸೂರನ್ಸ್ ವತಿಯಿಂದ ಪ್ರಮಾಣ ಪತ್ರ ಹಾಗೂ ಮೆಡ್ಲಗಳನ್ನು ಚಿಣ್ಣರಿಗೆ ವಿತರಿಸಲಾಯಿತು. ಎಸ್.ಬಿ.ಐ. ಲೈಫ್ ಇನ್ಸೂರನ್ಸ್ ಉಪ ಪ್ರಾದೇಶಿಕ ಪ್ರಬಂಧಕ(DRM) ಮನೋಜಕುಮಾರ, ಹಿರಿಯ ಶಾಖಾ ಪ್ರಬಂಧಕ(SBM) ಸಂಗಮೇಶ ಶೆಟ್ಟರ್, ಅಭಿವೃದ್ಧಿ ಪ್ರಬಂಧಕ (DM) ಸಿದ್ಧಪ್ಪ ಸಿದ್ಧಾರ್ಥ, ಕ್ಲಾಸಿಕ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ಪೂರ್ವ ಪ್ರಾಥಮಿಕ ವಿಭಾಗದ ಸಂಧ್ಯಾರಾಣಿ ಕೆ. ಹಾಗೂ ರಾಧಾ ಸಾವಕಾರ ಇದ್ದರು. ಬಹುಮಾನ ಪಡೆದ ಪುಟಾಣಿಗಳನ್ನು ಕ್ಲಾಸಿಕ್ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಉಪ್ಪಾರ ಅಭಿನಂದಿಸಿದ್ದಾರೆ.

Related Articles

Comments (0)

Leave a Comment