ಡಿಸಿಇಟಿ-25: ತಿದ್ದುಪಡಿಗೆ ಜೂನ್ 18,19ರಂದು ಅವಕಾಶ
- by Suddi Team
- June 15, 2025
- 8 Views

ಬೆಂಗಳೂರು: ಅಭ್ಯರ್ಥಿಗಳು ಡಿಸಿಇಟಿ-2025ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ವೇಳೆ ತಪ್ಪು ಮಾಹಿತಿ ನಮೂದಿಸಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಇಲ್ಲಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಜೂನ್ 18 ಅಥವಾ 19ರಂದು ಖುದ್ದು ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
ಅಭ್ಯರ್ಥಿಗಳು ಡಿಸಿಇಟಿ-2025ಕ್ಕೆ ಸಲ್ಲಿಸಿದ ಅರ್ಜಿ ಪ್ರತಿ, ಪ್ರವೇಶ ಪತ್ರ, ಪರಿಶೀಲನಾ ಪತ್ರ ಮತ್ತು ಅಗತ್ಯವಾದ ಎಲ್ಲಾ ಮೂಲ ದಾಖಲೆಗಳು ಮತ್ತು ಎಲ್ಲಾ ಪ್ರಮಾಣ ಪತ್ರಗಳ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು. ಪರಿಶೀಲನೆಗೆ ಹಾಜರಾಗುವ ಮೊದಲು 16-06-2025 ರಂದು ಸ್ಲಾಟ್ ಬುಕಿಂಗ್ ಮಾಡಿರಬೇಕು ಎಂದು ತಿಳಿಸಲಾಗಿದೆ.
ನಿಗದಿತ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸದೇ ಇರುವವರು, ದಾಖಲೆಗಳು / ಕ್ಷೇಮುಗಳು / ಡಿಪ್ಲೊಮಾ ಪರೀಕ್ಷೆಯ ಅಂಕಗಳು / ವೃತ್ತಿನಿರತ ಕ್ಷೇಮುಗಳನ್ನು ಸರಿಯಾಗಿ ನಮೂದಿಸದವರು ಈ ಅಂತಿಮ ಅವಕಾಶವನ್ನು ಬಳಸಿಕೊಳ್ಳಬಹುದು. ಎಲ್ಲಾ ಮಾಹಿತಿ ಸರಿ ಇರುವವರು ಕೆಇಎ ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪರಿಶೀಲನೆಗೆ ಹಾಜರಾದ ನಂತರ ಅನೇಕರಿಗೆ ತಮ್ಮ ತಪ್ಪುಗಳು ಅರಿವಿಗೆ ಬಂದಿದ್ದು ಅಂತಹವರು ಕೂಡ ಬರಬಹುದು ಎಂದು ಅವರು ತಿಳಿಸಿದ್ದಾರೆ.
ನಾಟಾ ಅಂಕ ನಮೂದು: ಡಿಪ್ಲೊಮಾ ಮೂಲಕ ಆರ್ಕಿಟೆಕ್ಟರ್ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ 2025ರ ನಾಟಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ನಾಟಾ -2025ರಲ್ಲಿ ಪಡೆದಿರುವ ಅಂಕಗಳನ್ನು ಜೂನ್ 17 ಮತ್ತು18ರಂದು ಪ್ರಾಧಿಕಾರದ ಪೋರ್ಟಲ್ ನಲ್ಲಿ ನಮೂದಿಸಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
Related Articles
Thank you for your comment. It is awaiting moderation.
Comments (0)