ಡಿವೈಡರ್‌ಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ: ಇಬ್ಬರ ಸಾವು
- by Suddi Team
- July 16, 2018
- 118 Views

ಬಾಗೇಪಲ್ಲಿ: ಡಿವೈಡರ್ ಗೆ ಡಿಕ್ಕಿ ಹೊಡೆದು ಪರಿಣಾಮ ದ್ವಿಚಕ್ರ ವಾಹನ ಸವಾರ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರ ಗಾಯಗೊಂಡ ಘಟನೆ ತಾಲ್ಲೂಕಿನ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಗಿರೆಡ್ಡಿಪಲ್ಲಿ ತಿರುವಿನಲ್ಲಿ ನಡೆದಿದೆ.
ಮೃತ ಯುವಕರು ಬಿಳ್ಳೂರು ಗ್ರಾಮದ ಫಯಾಜ್(25) ಮತ್ತು ಆಂಧ್ರಪ್ರದೇಶದ ಕದಿರಿ ಮೂಲದ ಉಸೇನ್ ಬಾಷ (26) ಎಂದು ತಿಳಿದು ಬಂದಿದೆ. ಗಾಯಗೊಂಡ ಬಿಳ್ಳೂರು ಗ್ರಾಮದ ಯುವಕ ಮಸ್ತಾನ್ (24) ನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತಪಟ್ಟ ಫಯಾಜ್ , ಉಸೇನ್ ಬಾಷ ಮತ್ತು ಗಾಯಗೊಂಡ ಮಸ್ತಾನ್ ಎಂಬ ಯುವಕರು ಚೇಳೂರಿನ ತಮ್ಮ ಆಪ್ತ ಸ್ನೇಹಿತನನ್ನು ಭೇಟಿಯಾಗಿ ಮೂರೂ ಜನ ಯುವಕರು ಒಂದೇ ದ್ವಿಚಕ್ರ ವಾಹನದಲ್ಲಿ ವಾಪಸ್ಸು ಬರುತ್ತಿದ್ದಾಗ ಎಂ.ನಲ್ಲಗುಟ್ಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮೀಪದ ಮುಗಿರೆಡ್ಡಿಪಲ್ಲಿ ಗ್ರಾಮದ ತಿರುವಿನಲ್ಲಿ ದ್ವಿಚಕ್ರ ವಾಹನ ಡಿವೈಡರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಬದಿಯ ಪೋದೆಯಲ್ಲಿ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಿಂಬದಿ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಈ ಸಂಬಂಧ ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Thank you for your comment. It is awaiting moderation.
Comments (0)