ಬೈಕ್‌ಗೆ ಟ್ರಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು: ಬೈಕ್ ಗೆ ಟ್ರಕ್ ಡಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹದೇವಪುರ ಬಳಿಯ ಹೂಡಿಯಲ್ಲಿ ನಡೆದಿದೆ.

ರಮೀಜ್ ಮೃತ ಬೈಕ್ ಸವಾರ. ಇಂದು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳುತಿದ್ದ ವೇಳೆ ಟ್ರಕ್ ಚಾಲಕ ಅತಿಯಾದ ವೇಗದಿಂದ ಬಂದು ರಮೀಜ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರಕ್ ಚಕ್ರಕ್ಕೆ ಸಿಲುಕಿ ರಮೀಜ್ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಡೆದಿದೆ.

ವೈಟ್ ಫಿಲ್ಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟ್ರಕ್ ಚಾಲಕನಿಗಾಗಿ ಹುಡುಕಾಟ ನಡೆಸಲಾಗಿದೆ.

Related Articles

Comments (0)

Leave a Comment