ಈಜಾಡೋಕೆ ಸ್ವಿಮ್ಮಿಂಗ್ ಪೂಲ್ ಬರ್ತಿದ್ದ ನಾಲ್ವರು ಮಾಡ್ತಿದ್ದ ಕೆಲ್ಸಾನೇ ಬೇರೆ! ಹಾಗಾದ್ರೆ ಅವರು ಏನು ಮಾಡ್ತಿದ್ರು ತಿಳ್ಕೊಬೇಕಾ?
- by Suddi Team
 - July 5, 2018
 - 293 Views
 
ಬೆಂಗಳೂರು: ಈಜಾಡೋಕೆ ಸ್ವಿಮಿಂಗ್ ಪೂಲ್ಗೆ ಎಲ್ಲರೂ ಜೊತೆಗೆ ಹೋಗ್ತಾರೆ. ಆದ್ರೆ ಈಜು ಮುಗಿಸಿ ಮನೆಗೆ ಹೋಗುವಾಗ ಮಾತ್ರ ಆ ನಾಲ್ವರು ಎಲ್ಲರಿಗಿಂತ ಬೇಗ ಹೋಗ್ತಾರೆ. ಹೋಗುವಾಗ ಎಲ್ಲರ ವಸ್ತುಗಳನ್ನು ಎಗರಿಸಿಕೊಂಡು ಹೋಗ್ತಾರೆ. ಏನಿದು ಸ್ಟೋರಿ ತಿಳ್ಕೋ ಬೇಕಾ? ಹಾಗಾದ್ರೆ ಈ ಸ್ಟೋರಿ ಓದಿ!
ವಿಜಯನಗರ ಸಾರ್ವಜನಿಕ ಈಜುಕೊಳದ ಬಳಿ ಕಳ್ಳರ ಗ್ಯಾಂಗ್ ಒಂದು ಪತ್ತೆಯಾಗಿದೆ. ಈಜಾಡಲು ಎಲ್ಲರ ಜೊತೆ ತೆರಳುವ ಈ ಖದೀಮರು, ಯಾರು ಎಲ್ಲೆಲ್ಲಿ ವಸ್ತುಗಳನ್ನ ಇಡ್ತಾರೆ ಅಂತ ಇಬ್ಬರು ಗಮನಿಸಿ ಮತ್ತಿಬ್ಬರಿಗೆ ಸಿಗ್ನಲ್ ಕೊಡ್ತಿದ್ರು. ಹೀಗೆ ನಾಲ್ಕು ಜನ ಸೇರಿ ಎಲ್ಲರೂ ಹೊರಬರೋ ಮುನ್ನವೇ ಮೇಲೆ ಬಂದು ಎಲ್ಲರ ವಸ್ತು ದೋಚಿ ಎಸ್ಕೇಪ್ ಆಗ್ತಿದ್ರು.
ಇದೇ ರೀತಿ ನಿನ್ನೆ ಕಳ್ಳತನ ಮಾಡಲು ಯತ್ನಿಸಿದಾಗ ಅಲ್ಲಿದ್ದ ಸ್ಥಳೀಯರೇ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಸಹಳ್ಳಿ ನಿವಾಸಿ ಅಬ್ರಾರ್, ಫರ್ವೇಜ್ ಹಾಗೂ ಇಬ್ಬರು ಬಾಲಾಪರಾಧಿಗಳ ಬಂಧನವಾಗಿದೆ. ಈಜಾಡುವ ನೆಪದಲ್ಲಿ ಬಂದು ಮೊಬೈಲ್, ಪರ್ಸ್ಗಳನ್ನು ಈ ಖದೀಮರು ದೋಚುತ್ತಿದ್ದರು.
ಈ ಹಿಂದೆಯೂ ಹಲವು ಭಾರೀ ಈಜುಕೊಳದ ಬಳಿ ಮೊಬೈಲ್ ಕಳ್ಳತನವಾಗಿತ್ತು, ಕಳ್ಳತನ ಮಾಡಿದ ಮೊಬೈಲ್ಗಳನ್ನು ಬೇರೆ ಬೇರೆ ಜಿಲ್ಲೆಯ ಸ್ನೇಹಿತರಿಗೆ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅರುಣ್ ಎಂಬವರು ಕಳೆದ ಎರಡು ವಾರಗಳ ಹಿಂದೆ ತಮ್ಮ 2 ಫೋನ್ ಕಳೆದುಕೊಂಡಿದ್ರು. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಇದೀಗ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಆರೋಪಿಗಳನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇನ್ನಿಬ್ಬರು ಬಾಲಾಪರಾಧಿಗಳನ್ನ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಸತತ ಎರಡು ತಿಂಗಳಿಂದ ಈ ಗುಂಪು ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದೆ ಎಂದು ತಿಳಿದುಬಂದಿದೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)