ಮಾದಕ ವ್ಯಸನ ಜಾಗೃತಿ ಕುರಿತು ರೀಲ್ ಮಾಡಿ,ಟ್ಯಾಗ್ ಮಾಡಿ: ಬೆಂಗಳೂರು ಪೊಲೀಸರ ಕರೆ
- by Suddi Team
- June 17, 2025
- 24 Views

ಬೆಂಗಳೂರು:ಮಾದಕ ವ್ಯಸನ ಕುರಿತು ಜಾಗೃತಿ ಮೂಡಿಸುವ ರೀಲ್ ಮಾಡುವಂತೆ ವಿದ್ಯಾರ್ಥಿ ಸಮುದಾಯಕ್ಕೆ ನಗರ ಪೊಲೀಸರು ಮನವಿ ಮಾಡಿದ್ದು ಹೆಚ್ಚಿನ ವೀಕ್ಷಣೆ ಪಡೆದ ರೀಲ್ ಮಾಡಿದವರಿಗೆ ಸನ್ಮಾನಿಸುವುದಾಗಿ ತಿಳಿಸಿದೆ.
ಬೆಂಗಳೂರಿನ ವಿದ್ಯಾರ್ಥಿಗಳೇ, ಜೂನ್ 26, 2025ರಂದು ಅಂತಾರಾಷ್ಟ್ರೀಯ ಮಾದಕ ವ್ಯಸನ ಹಾಗೂ ಕಳ್ಳ ಸಾಗಾಣಿಕೆ ವಿರೋಧ ದಿನದ ಅಂಗವಾಗಿ “ವ್ಯಸನದ ಸರಪಳಿ ಮುರಿಯಿರಿ: ಮುಂಜಾಗ್ರತೆ, ಚಿಕಿತ್ಸೆ ಹಾಗೂ ಎಲ್ಲರ ಚೇತರಿಕೆ” ಎಂಬ ವಿಷಯದ ಮೇಲೆ ಮಾದಕ ವ್ಯಸನದ ವಿರುದ್ಧ 30-45 ಸೆಕೆಂಡ್ ಗಳ ರೀಲ್ ಮಾಡಿ ಇನ್ಸ್ಟಾಗ್ರಾಂ ನಲ್ಲಿ @BlrCityPolice ಅನ್ನು ಟ್ಯಾಗ್ ಮಾಡಿ. ಅತಿ ಹೆಚ್ಚು ವೀಕ್ಷಣೆ ಪಡೆದ ರೀಲ್ ಮಾಡಿದವರಿಗೆ ಜೂನ್ 26ರಂದು ಸನ್ಮಾನ ಮಾಡಲಾಗುವುದು ಎಂದುಬೆಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.
ರೀಲ್ ಮಾಡಿ, ಟ್ಯಾಗ್ ಮಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)