ಕಮೀಷನ್ ಪಡೆದು ಆನ್ ಲೈನ್ ವಂಚನೆ ಮಾಡಿಸುವ ಗ್ಯಾಂಗ್: ಬೆಸ್ತು ಬಿದ್ದ ಪೊಲೀಸರು
- by Suddi Team
 - June 25, 2018
 - 182 Views
 
ಬೆಂಗಳೂರು:ಆನ್ ಲೈನ್ ವಹಿವಾಟು ನಡೆಸುವವರ ಖಾತೆಯಿಂದ ಹಣ ಲಪಟಾಯಿಸುವ ದೊಡ್ಡ ಗ್ಯಾಂಗ್ ಸಿಲಿಕಾನ್ ಸಿಟಿಯಲ್ಲಿ ಹುಟ್ಟಿಕೊಂಡಿದೆ ಎನ್ನುವ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿದೆ.ಕಮೀಷನ್ ಆಧಾರದಲ್ಲಿ ಇಂತಹ ವಂಚನೆ ಕೃತ್ಯ ನಡೆಯುತ್ತಿದೆ ಎನ್ನುವುದು ಬೆಚ್ಚಿ ಬೀಳಿಸುವ ವಿಷಯವಾಗಿದೆ.
ಇವತ್ತು ಬಹುತೇಕ ವಹಿವಾಟಿಗೆ ಆನ್ ಲೈನ್ ಸ್ಪರ್ಶ ಸಿಕ್ಕಿದೆ,ಖರೀದಿ,ಮಾರಾಟ ಎಲ್ಲವೂ ಆನ್ ಲೈನ್ ನಲ್ಲೇ ನಡೆಯುತ್ತೆ ಇದರಲ್ಲಿ ಕೊಂಚ ಯಾಮಾರಿದ್ರೂ ನಿಮ್ಮ ಖಾತೆ ಖಾಲಿಯಾಗೋದಂತೂ ಗ್ಯಾರಂಟಿ.
ಐಟಿ ಹೆಸರಲ್ಲಿ ಮೆಸೆಜ್ ಕಳುಹಿಸಿ, ಆನ್‌ಲೈನ್‌ನಲ್ಲೇ ಬ್ಯಾಂಕ್ ಖಾತೆಗೆ 40 ಸಾವಿರ ರೂ.ಕನ್ನ ಹಾಕಿದ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.ಅಮೃತಹಳ್ಳಿಯ ಶಂಕರ್ ವಂಚನೆಗೆ ಒಳಗಾದ ವ್ಯಕಿ. ಮಣಿಪುರ ಮೂಲದ ಲಂಗ್ ಮುನ್ ಪಾನ್ ಎಂಬ ವಂಚಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ಶಂಕರ್ ,ಆದಾಯ ತೆರಿಗೆ ಹಾಗೂ ಜಿಎಸ್ ಟಿ ಪಾವತಿಸಲು ಜೂ.11 ರಂದು ಆನ್ ಲೈನ್ ನಲ್ಲಿ ಅರ್ಜಿ ಹಾಕಿದ್ದರು. ಮಾರನೇ ದಿನ ಶಂಕರ್ ಮೊಬೈಲ್ ಗೆ ನಿಮಗೆ ಐಟಿ ರಿಫಂಡ್ ಆಗಿದೆ. ಮಾಹಿತಿ ಪಡೆಯಲು ಲಿಂಕ್ ಸಮೇತ ಆರೋಪಿ ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ ಶಂಕರ್ ವಂಚಕನ ಸೂಚನೆ ಮೇರೆಗೆ ಲಿಂಕ್ ತೆರೆದು ಬ್ಯಾಂಕ್ ನಂಬರ್ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ದಾಖಲಿಸಿದ್ದರು. ಬಳಿಕ ಜೂ.13ರಂದು ಆರೋಪಿಯು ಶಂಕರ್ ನ ಖಾತೆಯಿಂದ ಸುಮಾರು 40 ಸಾವಿರ ರೂ. ಕೊತ್ತನೂರಿನ ಕರ್ನಾಟಕ ಬ್ಯಾಂಕ್‌ನಿಂದ ಹಣ ಡ್ರಾ ಆಗಿದೆ ಎಂಬ ಸಂದೇಶ ಬಂದಿದೆ. ಇದನ್ನು ಕಂಡು ಆತಂಕಕ್ಕೆ ಒಳಗಾದ ಶಂಕರ್, ಕರ್ನಾಟಕ ಬ್ಯಾಂಕ್ ಆಧಿಕಾರಿಯನ್ನು ಸಂಪರ್ಕಿಸಿ ಡ್ರಾ ಮಾಡಿಕೊಂಡಿರುವ ಆರೋಪಿಯ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಮುಂದಾಗಿದ್ದಾರೆ. ಅಷ್ಟೊತ್ತಿಗಾಲೇ ಆರೋಪಿಯು ಎಟಿಎಂ ಮೂಲಕ ಹಣ ಡ್ರಾ ಮಾಡಿಕೊಂಡು ಎಸ್ಕೇಪ್ ಆಗಿರುವುದಾಗಿ ಖುದ್ದು ಶಂಕರ್ ತಿಳಿಸಿದ್ದಾರೆ.
ಮಣಿಪುರದ ಮೂಲದ ಆರೋಪಿ ಕಳೆದ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಎಂಪೇರ್ ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ತಿಂಗಳಿಗೆ 6 ಸಾವಿರ ರೂ. ದುಡಿಯುತ್ತಿದ್ದ. ಹಣಕಾಸು ವರ್ಗಾವಣೆಗಾಗಿ ಕರ್ನಾಟಕ ಬ್ಯಾಂಕ್ ನಲ್ಲಿ ಖಾತೆ ಸಹ ತೆರೆದಿದ್ದ.ವಂಚನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಕಳೆದ ಮಾರ್ಚ್ ನಿಂದ ಈವರೆಗೂ 8 ಲಕ್ಷ ರೂ.ಬ್ಯಾಂಕ್ ನಲ್ಲಿ ವಹಿವಾಟು ನಡೆಸಿರುವುದು ಕಂಡು ಬಂದಿದೆ.
ಈತನನ್ನು ತ್ರೀವ ವಿಚಾರಣೆ ನಡೆಸಿದಾಗ ಈತನ ಹಿಂದೆ ಹಲವರ ಕೈವಾಡವಿದೆ ಪೊಲೀಸರು ಕಂಡುಕೊಂಡಿದ್ದಾರೆ. ದೊಡ್ಡಮಟ್ಟದಲ್ಲಿ ವಂಚನೆ ಮಾಡಿದರೆ ಈತನಿಗೆ 4ರಿಂದ 5 ಸಾವಿರ ಕಮೀಷನ್ ಕೊಡುತ್ತಿದ್ದರು ಎಂಬ ಸತ್ಯ ಬಾಯ್ಬಿಟಿದ್ದಾನೆ. ಇದನ್ನು ಕೇಳಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ,ಇದೊಂದು ದೊಡ್ಡ ಜಾಲ ಎನ್ನುವ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದೊಡ್ಡಮಟ್ಟದ ವ್ಯೂಹ ರಚಿಸಿದ್ದಾರೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)