ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಬಳ್ಳಾರಿ: ಬ್ಯಾಂಕ್ ಒಂದರಲ್ಲಿ ಲೀಗಲ್ ಅಡ್ವವೈಸರ್ ಆಗಿದ್ದ ಲಾಯರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದು, ಹಿರಿಯ ಅಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಕ್ ನಲ್ಲಿ ಲೀಗಲ್ ಅಡವೈಸರ್ ಆಗಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ಮಹೇಶ್(೨೮) ಆತ್ಮಹತ್ಯಗೆ ಶರಣಾದ ವ್ಯಕ್ತಿ.
ಹೊಸಪೇಟೆ ಬ್ರಾಂಚ್ ನಲ್ಲಿ ಮಹೇಶ್ ಕೆಲಸ ಮಾಡುತಿದ್ದು, ಮೇಲಾಧಿಕಾರಿಗಳ ಕಿರುಕುಳ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನೊ ಆರೋಪ ಕೇಳಿ ಬಂದಿದೆ.
ಸೂಸೈಡ್ ಮಾಡಿಕೊಂಡ ಮಹೇಶ್ ಡೆತ್ ನೋಟ್ ಲಭ್ಯವಾಗಿದೆ. ಮೇಲಾಧಿಲಾರಿಗಳ ಕಿರುಕುಳಕ್ಕೆ ಸೂಸೈಡ್ ಮಾಡಿಕೊಂಡಿರೋದಾಗಿ ಮಹೇಶ್ ಪತ್ರದಲ್ಲಿ ಬರೆದಿದ್ದಾರೆ. ದಾಖಲೆಗಳು ಸರಿಯಾಗಿ ಇಲ್ಲದಿದ್ದರೂ ಲೋನ್ ಕೊಡಲು ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದರು ಎಂದು ಆರೊಪಿಸಿದ್ದಾರೆ.
Comments (0)