ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್‌ ನಟ ಸುಶಾಂತ್ ಆತ್ಮಹತ್ಯೆ

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್(35) ಆತ್ಮಹತ್ಯೆಗೆ ಶರಣಾಗಿದ್ದಾರೆ.ಮುಂಬೈನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಂ.ಎಸ್.ಧೋನಿ ದ ಅನ್ ಟೋಲ್ಡ್ ಸ್ಟೋರಿ ಚಿತ್ರದ ಮೂಲಕ ಮನೆ ಮಾತಾಗಿದ್ದ ನಟ ಸುಶಾಂತ್, ಟಿವಿ ಸೀರಿಯಲ್ ಗಳಲ್ಲಿಯೂ ನಟಿಸಿದ್ದರು, ಇತ್ತೀಚೆಗೆ ಲಾಕ್ ಡೌನ್ ಕಾರಣದಿಂದ ಅಪಾರ್ಟ್ ಮೆಂಟ್ ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮರಣೋತ್ತರ. ಪರೀಕ್ಷಾ ವರದಿಯನ್ನು ಎದುರುನೋಡಲಾಗುತ್ತಿದೆ.

Related Articles

Comments (0)

Leave a Comment