ಮೂಟೆಯಲ್ಲಿ ಡೆಡ್ ಬಾಡಿ; ಸಿಲಿಕಾನ್ ಸಿಟಿಯಲ್ಲಿ ಮಹಿಳೆಯ ಭಯಾನಕ‌ ಮರ್ಡರ್..!

ಬೆಂಗಳೂರು: ಮಹಿಳೆಯನ್ನ ಕೊಲೆ ಮಾಡಿ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ಎಸ್ಕೇಪ್‌ ಆದ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಬೆಳಕಿಗೆ ಬಂದಿದೆ.

ನಿನ್ನೆ‌ ತಡರಾತ್ರಿ ಆಟೋದಲ್ಲಿ ಬಂದ‌ ದುಷ್ಕರ್ಮಿಗಳು ಮಹಿಳೆಯ ಡೆಡ್ ಬಾಡಿ ಕಸದ ಲಾರಿಯಲ್ಲಿಟ್ಟು ಹೋಗಿದ್ದಾರೆ. ಮಹಿಳೆಯನ್ನ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ಇದೆ. ಸದ್ಯ ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. 30 ರಿಂದ 35 ವರ್ಷ ಆಸುಪಾಸಿನ ಮಹಿಳೆ ಎಂದು ಪೊಲೀಸರು ಅಂದಾಜಿಸಿದ್ದು,  ಮೃತದೇಹವನ್ನ ಪೋಸ್ಟ್ ಮಾರ್ಟಂ‌ಗೆ ರವಾನಿಸಿದ್ದಾರೆ.

ಚನ್ನಮ್ಮನಕರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದ ಮೇಲೆ ಹಂತಕರಿಗಾಗಿ ಹುಡುಕಾಟ ನಡೆಸಿದ್ದಾರೆ.

ನಿನ್ನೆ ತಡರಾತ್ರಿ ಕಸ ಹಾಕಲು ಬಂದ ಸಾರ್ವಜನಿಕನಿಂದ ಪ್ರಕರಣದ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ತಡರಾತ್ರಿ 1.40ಕ್ಕೆ ಕಸ ಹಾಕಲು ಬಂದ ವ್ಯಕ್ತಿಯೊಬ್ಬ ಅನುಮಾನಾಸ್ಪದ ಚೀಲ ಕಂಡು ಬಿಚ್ಚಿದಾಗ ಯುವತಿ ತಲೆ ಕೂದಲು ಕಾಣಿಸಿದೆ. ತಕ್ಷಣವೇ ಪೊಲೀಸ್ ಠಾಣೆಗೆ ವ್ಯಕ್ತಿ ಮಾಹಿತಿ ನೀಡಿದ್ದು, ಪೊಲೀಸರು ಬಂದು ನೋಡಿದಾಗ ಯುವತಿ ಕೊಲೆ ವಿಚಾರ ಬಯಲಿಗೆ ಬಂದಿದೆ.

ರಸ್ತೆಯ ಇಕ್ಕೆಲಗಳ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ್ದು, ಈ ವೇಳೆ ಒಬ್ಬ ವ್ಯಕ್ತಿ ಆಟೋದಲ್ಲಿ ಬಾಡಿ ತಂದು ಬಿಸಾಡಿರುವ ವೀಡಿಯೋ ಲಭ್ಯವಾಗಿದೆ. ಯುವತಿ ಅರ್ಬನ್ ಕಂಪನಿ ಟಿ ಶರ್ಟ್-ಪ್ಯಾಂಟ್ ಧರಿಸಿದ್ದು, ಮೃತದೇಹ ಪತ್ತೆಯಾದಾಗ ಯುವತಿಯ ಒಳ ಉಡುಪುಗಳು ದೇಹದ ಮೇಲೆ ಇರಲಿಲ್ಲ. ಹೀಗಾಗಿ, ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದು, ಹಂತಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Related Articles

Comments (0)

Leave a Comment