ಕ್ಯಾಬ್ ಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ನಡೆಯದಂತೆ ಮುನ್ನೆಚ್ಚರ ವಹಿಸಿ: ಆ್ಯಪ್ ಆಧಾರಿತ ಕ್ಯಾಬ್ ಕಂಪನಿಗಳಿಗೆ ಸೂಚನೆ
- by Suddi Team
 - June 30, 2018
 - 108 Views
 
ಬೆಂಗಳೂರು:ಇತ್ತೀಚೆಗೆ ಓಲಾ ಕ್ಯಾಬ್‌ನಲ್ಲಿ ನಡೆದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಇಂಥ ಯಾವುದೇ ಘಟನೆ ನಡೆಯದಂತೆ ಎಚ್ವರಿಕೆ ವಹಿಸುವಂಥೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಓಲಾ ಕ್ಯಾಬ್‌ನಲ್ಲಿ ನಡೆದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳೊಂದಿಗೆ ಬಿಎಂಆರ್‌ಡಿಎನಲ್ಲಿ ಸಭೆ ನಡೆಸಿದರು, ಇತ್ತೀಚೆಗೆ ಆ್ಯಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದಂಥ ಘಟನೆ ನಡೆದಿವೆ. ಚಾಲಕರನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರ ಸಂಪೂರ್ಣ ವಿವರ ತೆಗೆದುಕೊಳ್ಳುವಂತೆ ಹಾಗು ಚಾಲಕರ ಹಿನ್ನೆಲೆ ಪಡೆದು, ಪೊಲೀಸರಿಂದ ಚಾಲಕನ ದಾಖಲಾತಿಯನ್ನು ಪರಿಶೀಲಿಸವುದನ್ನು ಗಂಭೀರವಾಗಿ ನಡೆಸುವಂತೆಯೂ ಸಭೆಯಲ್ಲಿ ಚರ್ಚೆಯಾಯಿತು.
ಮಹಿಳಾ ಚಾಲಕಿಯರು ಹೆಚ್ವಿನ ಸಂಖ್ಯೆಯಲ್ಲಿ ಬರುವುದರಿಂದ ಮಹಿಳಾ ಸುರಕ್ಷತೆಗೂ ಆದ್ಯತೆ ನೀಡಿದಂತಾಗಲಿದೆ. ಈಗ ಬೆರಳೆಣಿಕೆ ಮಹಿಳಾ ಚಾಲಕಿಯರಷ್ಟೆ ಇದ್ದಾರೆ. ರಾತ್ರಿ ಸಂದರ್ಭದಲ್ಲಿ ಮಹಿಳೆಯರೇ ಚಾಲಕಿಯರಾದರೆ, ಮಹಿಳಾ ಪ್ರಯಾಣಿಕರು ಭಯವಿಲ್ಲದೇ ರಾತ್ರಿ ಕೂಡ ಧೈರ್ಯವಾಗಿ ಸಂಚರಿಸಬಹುದು ಎಂಬ ಸಲಹೆ ವ್ಯಕ್ತವಾಯಿತು.
ನಿತ್ಯ ಬೆಂಗಳೂರಿನಲ್ಲಿ ಟ್ಯಾಕ್ಸಿಗಳು 3.5 ಲಕ್ಷ ಟ್ರಿಪ್ ಕಾರ್ಯಾಚರಣೆ ನಡೆಸುತ್ತಿವೆ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಸುರಕ್ಷತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಟ್ಯಾಕ್ಸಿ ಚಾಲಕರು ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಕ್ಯಾಬ್‌ಗಳು ಜನರ ಜೀವನದ ಭಾಗವಾಗಿ ಹೋಗಿದೆ. ಹೀಗಾಗಿ ಪ್ರಯಾಣಿಕರಿಗೆ ಸುರಕ್ಷತೆಯ ಸೇವೆ ನೀಡುವುದು ಅಗತ್ಯವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಇಂಥ ಘಟನೆ ಮರುಕಳುಹಿಸದ ರೀತಿ ಕೆಲಸ ನಿರ್ವಹಿಸುವಂತೆ ಪರಮೇಶ್ವರ್ ಕ್ಯಾಬ್ ಮುಖ್ಯಸ್ಥರಿಗೆ ಪರಮೇಶ್ವರ್ ಸೂಚನೆ ನೀಡಿದರು.
ರಾತ್ರಿ ವೇಳೆ ಮಹಿಳೆ ಕ್ಯಾಬ್ ಬಳಸಬೇಕಿದ್ದರೆ ಆ ಕ್ಯಾಬ್ ಹಾಗೂ ಚಾಲಕರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು.
ಅಥವಾ ಇನ್‌ಫಾರ್ಮೆಷನ್ ಡೆಪಾಸಿಟ್ ಮಾಡುವ ರೀತಿಯಲ್ಲಿ ಅಪ್ಲಿಕೇಷನ್ ಸಿದ್ಧ ಮಾಡಿ ನಿಮ್ಮ ಆ್ಯಪ್‌ಗಳಲ್ಲಿಯೂ ಅಳವಡಿಸಿಕೊಳ್ಳುವ ಬಗ್ಗೆಯೂ ವಿಸ್ಕೃತವಾಗಿ ಚರ್ಚೆ ನಡೆಯಿತು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)