ಸಾಲದ ಸಮಸ್ಯೆಯಿಂದ ಹೊರಬರಲು ಪತ್ನಿಗೆ ಗುಂಡಿಕ್ಕಿ ಕೊಂದೆ: ಉದ್ಯಮಿ ಗಣೇಶ್
- by Suddi Team
- June 22, 2018
- 105 Views
ಬೆಂಗಳೂರು: ಪತ್ನಿಗೆ ಗುಂಡಿಕ್ಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಉದ್ಯಮಿ ಗಣೇಶ್ ತನ್ನ ಇಬ್ಬರು ಮಕ್ಕಳ ಮೇಲೂ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದು, ಪೊಲೀಸರು ಬಿಡದಿ ಬಳಿ ಗಣೇಶ್ನನ್ನು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ತನ್ನ ಪತ್ನಿ ಸಹನಾ (42) ಳನ್ನು ಗುಂಡಿಕ್ಕಿ ಕೊಲೆ ಮಾಡಿ, ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಉದ್ಯಮಿ ಗಣೇಶ್ ಪರಾರಿಯಾಗಿದ್ದ. ಬಿಡದಿ ಬಳಿಯ ಬನಗಿರಿ ಯಲ್ಲಿ ತಲೆ ಮರಿಸಿಕೊಂಡಿದ್ದ ಉದ್ಯಮಿ ಗಣೇಶ್ ಮತ್ತು ಮಕ್ಕಳನ್ನು ಬಂಧಿಸಲು ಪೊಲೀಸರು ಹೋದಾಗ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್ ಮಾಡಿ ಮಕ್ಕಳ ಮೇಲೆ ಗಣೇಶ್ ಗುಂಡು ಹಾರಿಸಿದ್ದಾನೆ.
ಮಗಳ ಹೊಟ್ಟೆಗೆ ಹಾಗೂ ಮಗನ ಕೈ ಮತ್ತು ತೊಡೆ ಭಾಗಕ್ಕೆ ಗುಂಡು ತಗುಲಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಕ್ಕಳಿಬ್ಬರನ್ನ ಆಸ್ಪತ್ರೆ ಗೆ ಸೇರಿಸಲಾಗಿದೆ. ಅದೃಷ್ಟ ವಶಾತ್ ಮಕ್ಕಳಿಬ್ಬರು ಪ್ರಣಾಪಾಯದಿಂದ ಪಾರಾಗಿದ್ದಾರೆ.
ನನಗೆ ಸಾಲದ ಸಮಸ್ಯೆ ಇತ್ತು ಅದಕ್ಕಾಗಿ ಆಸ್ತಿ ಮಾರಾಟ ಮಾಡಲು ಪ್ರಯತ್ನ ಮಾಡ್ತಿದ್ದೆ. ಆದ್ರೆ, ಆಸ್ತಿ ಮಾರಾಟ ಮಾಡಲು ಪತ್ನಿ ಒಪ್ಪಿರಲಿಲ್ಲ. ಆಸ್ತಿ ಮಾರಾಟ ಮಾಡಿದರೆ ಮಕ್ಕಳು ಬೀದಿಗೆ ಬೀಳ್ತಾರೆ ಅಂತ ಹಠ ಹಿಡಿದಿದ್ದಳು.
ಮಕ್ಕಳಿಗಾಗಿ ನಾನು ಜೀವ ಕಳೆದುಕೊಳ್ಳುವ ರೀತಿ ಇರ್ಲಿಲ್ಲ. ಅದಕ್ಕಾಗಿ ನಾನು ಈ ಕೃತ್ಯ ಮಾಡಿದೆ ಎಂದು ಗಣೇಶ್ ತಪ್ಪೊಪ್ಪಿಕೊಂಡಿದ್ದಾನೆ.
Related Articles
Thank you for your comment. It is awaiting moderation.


Comments (0)