ದೀಪಾವಳಿ ಸಂಭ್ರಮದಲ್ಲಿದ್ದ ರೆಡ್ಡಿಗೆ ಸಿಸಿಬಿ ಶಾಕ್: ರೆಡ್ಡಿ ಬಂಧನ?

ಬೆಂಗಳೂರು: ಕಳೆದ ಬಾರಿ ವರಮಹಾಲಕ್ಷಿ ಹಬ್ಬದ ದಿನ ಐಟಿ ಇದ್ದಕ್ಕಿದ್ದ ಹಾಗೆ ಸಚಿವ ಡಿಕೆ ಶಿವಕುಮಾರ್ ‌ಗೆ ಶಾಕ್ ನೀಡಿತ್ತು. ಇಂದು ದೀಪಾವಳಿ ಸಂಭ್ರಮದಲ್ಲಿದ್ದ ಜನಾರ್ದನ ರೆಡ್ಡಿಗೆ ಸಿಸಿಬಿ ಶಾಕ್ ನೀಡಿದೆ. ನೋಟು ರದ್ಧತಿ ವೇಳೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಸಂಬಂಧ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ರೆಡ್ಡಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ‌.

ಗಣಿದಣಿ ಗಾಲಿ ಜನಾರ್ದನ ರೆಡ್ಡಿಗೆ ಮತ್ತೊಂದು ಹೊಸ ಪ್ರಕರಣ ಕಂಟಕ ತಂದಿದೆ. ಇಡಿ ಅಧಿಕಾರಿಯೋರ್ವನ ಜೊತೆ ಸೇರಿ ಹಳೆ ಪ್ರಕರಣವೊಂದನ್ನು ಮುಚ್ಚಿಹಾಕಲು ರೆಡ್ಡಿ 20 ಕೋಟಿ ಡೀಲ್ ಮಾಡಿ ಸಿಕ್ಕಿಬಿದ್ದಿದ್ದಾರೆ.

ಆ್ಯಂಬಿಡೆಂಟ್ ಮಾರ್ಕೇಟಿಂಗ್ ಕಂಪನಿ ಮೋಸ ಮಾಡಿದೆ ಅಂತ ಡಿಜೆ ಹಳ್ಳಿ ಸೇರಿದಂತೆ ಹಲವು ಕಡೆ ನೂರಾರು ಜನರು ಪ್ರಕರಣ ದಾಖಲಿಸಿದ್ರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ವಿಚಾರಣೆಗಾಗಿ ಆ್ಯಂಬಿಡೆಂಟ್ ಕಂಪನಿಯ ಮಾಲೀಕ ಫರೀದ್ ಖಾನ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಈ ವೇಳೆ ಆತನ ಅಕೌಂಟ್ ಪರಿಶೀಲನೆ ಮಾಡಿದಾಗ, ಫರೀದ್ ಖಾನ್ ರಮೇಶ ಕಠೋರಿಗೆ 18 ಕೋಟಿ ಹಣ ಕಳಿಸಿರೋದು ಬೆಳಕಿಗೆ ಬಂದಿದೆ.

18 ಕೋಟಿ ಹಣ ರಮೇಶನಿಗೆ ವರ್ಗಾ ಮಾಡಿದ್ದು ಏಕೆ? ಯಾರಿಗಾಗಿ ಅಂತ ಪೊಲೀಸ್ರು ವಿಚಾಸಿದಾಗ ಫರೀದ್ ಖಾನ್ ಹಳೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾನೆ. ಫರೀದ್ ಖಾನ್ ವಿರುದ್ಧ 2017 ರಲ್ಲಿ ಬ್ಲಾಕ್ ಅಂಡ್ ವೈಟ್ ಪ್ರಕರಣಕ್ಕೆ ಸಂಬಂಧಿಸದಂತೆ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಫರೀದ್ ಖಾನ್ ಮನೆ ಸೇರಿದಂತೆ ಹಲವು ಕಡೆ ದಾಳಿ ಮಾಡಿದ್ರು. ಅಲ್ಲದೇ ಕೋಟ್ಯಾಂತರ ರೂಪಾಯಿ ಮೌಲ್ಯದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಜೊತೆಗೆ ಪ್ರಕರಣ ಕೂಡ ಇನ್ನು ಇಡಿಯಲ್ಲೇ ನಡೆಯುತ್ತಿದೆ. ಈ ಪ್ರಕರಣವನ್ನು ಇಡಿ ಅಧಿಕಾರಿಗಳ ಜತೆ ಸೇರಿ ಮುಚ್ಚಿಹಾಕಲು ಫರೀಧ್ ಖಾನ್ ಪ್ಲಾನ್ ಮಾಡಿದ್ದ.

ಈ ಪ್ರಕರಣವನ್ನ ಮುಚ್ಚಿಹಾಕಲು ಏನು ಮಾಡಬೇಕು ಎಂದು ಫರೀದ್ ಖಾನ್, ಆಪ್ತ ಸ್ನೇಹಿತ ಅಲಿಖಾನ್ ಬಳಿ ಕೇಳಿದಾಗ ಅಲಿಖಾನ್, ಜನಾರ್ದನ ರೆಡ್ಡಿಯವರ ಹೆಸರನ್ನ ಪ್ರಸ್ತಾಪಿಸುತ್ತಾನೆ. ರೆಡ್ಡಿಯವರು ತಮ್ಮ ಕೇಸ್ ನ್ನ ಈಗಾಗಲೇ ಡೀಲ್ ಮಾಡಿ ಬಗೆ ಹರಿಸಿಕೊಂಡಿದ್ದು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅವರ ಆಸ್ತಿ ಮರಳಿ ಬರಲಿದೆ ಎಂದಿದ್ದರಂತೆ. ಅದರಂತೆ ಫರೀದ್ ಖಾನ್ ನನ್ನ ಸ್ನೇಹಿತ ಅಲಿಖಾನ್ ಮತ್ತು ಬ್ರೀಜೇಶ್ ರೆಡ್ಡಿ, ಗಾಲಿ ಜನಾರ್ದನ್ ರೆಡ್ಡಿ ಬಳಿ ಕರೆದೋಯ್ದು ಡೀಲಿಗೆ ಕೂರಿಸುತ್ತಾರೆ. ಕೊನೆಯಲ್ಲಿ 20 ಕೋಟಿಗೆ ಡೀಲ್ ಮುಗಿಯುತ್ತದೆ. 20 ಕೋಟಿಯಲ್ಲಿ ಮೊದಲು ಎರಡು ಕೋಟಿ ಹಣ ನಗದು ರೂಪದಲ್ಲಿ ಪಡೆಯುತ್ತಾರೆ ರೆಡ್ಡಿ. ಬಳಿಕ 18 ಕೋಟಿ ಹಣವನ್ನ ರಮೇಶ್ ಕಠೋರಿ ಮೂಲಕ ಬಂಗಾರದ ರೂಪದಲ್ಲಿ 57 ಕೆಜಿ ಚಿನ್ನವನ್ನು ಪಡಯುತ್ತಾರೆ.

ಒಟ್ಟಾರೆಯಾಗಿ ಜನಾರ್ದನ್ ರೆಡ್ಡಿ , ಫರೀದ್ ಖಾನ್ ಹಳೆ ಪ್ರಕರಣವೊಂದನ್ನು ಇಡಿ ಅಧಿಕಾರಿಗಳ ಜತೆ ಸೇರಿ ಮುಚ್ಚಿ ಹಾಕಲು ಹೋಗಿ ತಾವೇ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದೀಗ ರೆಡ್ಡಿ ಎಸ್ಕೆಪ್ ಆಗಿದ್ದು, ರೆಡ್ಡಿ ಬಂಧನಕ್ಕಾಗಿ ಪೊಲೀಸ್ರು ಬಲೆ ಬೀಸಿದ್ದಾರೆ.

Related Articles

Comments (0)

Leave a Comment