ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಚಾಮರಾಜನಗರ: ಆಶಾ ಕಾರ್ಯಕರ್ತೆಯೊಬ್ಬರ ಮನೆ ಮುಂದೆ ಬಿಲ್ ಕಲೆಕ್ಟರ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಬಸವರಾಜು(38) ಎಂಬುವವೆಉ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಬಸವರಾಜು ಯಾರದೋ ಮೊಬೈಲ್ ಕರೆ ಬಂತು ಎಂದು ಹೇಳಿ ಹೋದವರು ಬೆಳಿಗ್ಗೆ ಅದೇ ಗ್ರಾಮದ ಆಶಾ ಕಾರ್ಯಕರ್ತೆ ಶಾರದಾ ಎಂಬುವವರ ಮನೆಯ ಮುಂದೆ ಶವವಾಗಿ ಬಿದ್ದಿದ್ದಾರೆ. ಮೃತ ಬಸವರಾಜು ಬಳಸುತ್ತಿದ್ದ ಬೈಕ್ ಮಾತ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂದೆ ನಿಂತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬಸವರಾಜು ಅವರು ಕೋವಿಡ್ – 19 ಹಿನ್ನೆಲೆಯಲ್ಲಿ ಹರದನಹಳ್ಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದರು. ಮೃತ ವ್ಯಕ್ತಿಗೆ ಪತ್ನಿ ಒಂದೂವರೆ ವರ್ಷದ ಗಂಡು ಮಗು ಇದ್ದು ತಾಯಿಯ ಆರೋಗ್ಯ ಸ್ಥಿತಿ ಸಹ ಸರಿ ಇಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿದ್ದಾರೆ.
Comments (0)