ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ರಾಯಚೂರು: ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಬೈಕ್ ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನ ಬಂಧಿಸುವಲ್ಲಿ ನೇತಾಜಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ 40 ಸಾವಿರ ಬೆಲೆಯ, 3 ಲಕ್ಷ ಮೌಲ್ಯದ 15 ಬೈಕ್ಗಳನ್ನಿ ಜಪ್ತಿ ಮಾಡಲಾಗಿದೆ. ಮಾನಸಿಕ ಅಸ್ವಸ್ಥನಂತೆ ನಟಿಸಿ, ಬೈಕ್ ಮಾಲೀಕರನ್ನ ಹಾಗೂ ಪೊಲೀಸರನ್ನ ಯಾಮಾರಿಸುತ್ತಿದ್ದ ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ತಾಯಪ್ಪ (23) ಎಂಬ ಚೋರನನ್ನ ನೇತಾಜಿ ನಗರ ಪೊಲೀಸರು ಎಡೆಮುರಿ ಕಟ್ಟಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಬೈಕ್ ಕಳ್ಳತನ ಪ್ರಕರಣಗಳು ಪೊಲೀಸರಿಗೆ ತಲೆ ನೋವು ತರಿಸಿದ್ದವು. ಈ ಹಿನ್ನೆಲೆಯಲ್ಲಿ ಕಳ್ಳತನ ಭೇದಿಸಲು ಪೂರ್ವ ವಲಯ ಸಿಪಿಐ ಫಸಿಯುದ್ದೀನ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತೀವ್ರ ಕಾರ್ಯಾಚರಣೆಗಿಳಿದ ತಂಡ ಆರೋಪಿ ತಾಯಪ್ಪನನ್ನ ಬಂಧಸಿದ್ದಾರೆ
Comments (0)