- ದೇಶ
 - ಮುಖ್ಯ ಮಾಹಿತಿ
 - ವಾಣಿಜ್ಯ
 - Like this post: 0
 
WhatsApp ನಿಂದ paytm, BHIM ಮಾದರಿಯ ಪಾವತಿ ಸೇವೆ ಆರಂಭ!
- by Suddi Team
 - June 24, 2018
 - 163 Views
 
ವಾಟ್ಸಾಪ್ ಭಾರತದಲ್ಲಿ ತನ್ನ ಪಾವತಿ ಸೇವೆಗಳ ಪರೀಕ್ಷೆಯನ್ನು ಆರಂಭಿಸಿದೆ. ಸೇವೆಯ ಪೂರ್ಣ ಪ್ರಮಾಣದ ಬಿಡುಗಡೆಗೆ ಮುಂಚಿತವಾಗಿ ಅದರ ಪಾವತಿ ಮತ್ತು ಗೌಪ್ಯತೆಗೆ ಯಾವುದೇ ತೊಂದರೆಯಾಗದಂತೆ ಅಪ್ಡೇಟ್ ಮಾಡುತ್ತಿದೆ.
ಪ್ರಪಂಚದಾದ್ಯಂತ 1.5 ಬಿಲಿಯನ್ ಬಳಕೆದಾರರಿರುವ ಫೇಸ್ ಬುಕ್ ಮಾಲೀಕತ್ವದ ವಾಟ್ಸಾಪ್ ಸಂಸ್ಥೆಗೆ
ಭಾರತದಲ್ಲಿ 200 ದಶಲಕ್ಷಕ್ಕೂ ಹೆಚ್ಚಿನ ಬಳಕೆದಾರರಿದ್ದು, ಒಂದು ದಶಲಕ್ಷ ಜನರಿಂದ WhatsApp ಪಾವತಿ ಸೇವೆಗಳನ್ನು ಪರೀಕ್ಷಿಸಲಾಗುತ್ತಿದೆ.
ವಾಟ್ಸಾಪ್ payments features ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಬಳಕೆದಾರರಿಗೆ ಸರಳವಾದ ಭಾಷೆಯನ್ನು ಒದಗಿಸಲು ಸಾಕಷ್ಟು ಪ್ರಯತ್ನ ಮಾಡಲಾಗಿದ್ದು, WhatsApp ಪಾವತಿಯ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸಲಾಗಿದೆ. ಅಲ್ಲದೆ, ಬೀಟಾ ಪ್ರಾರಂಭವಾದಾಗಿನಿಂದ ನಾವು ಸೇರಿಸಿದ ಪಾವತಿ ವಹಿವಾಟಿನ ವೈಶಿಷ್ಟ್ಯಗಳನ್ನು ಕೂಡ ಇದು ಪ್ರತಿಬಿಂಬಿಸುತ್ತದೆ ಎಂದು ವ್ಯಾಟ್ಸಾಪ್ ಸಂಸ್ಥೆ ತಿಳಿಸಿದೆ.
ವಾಟ್ಸಾಪ್ ಪಾವತಿ ಸೇವೆ ಎಂದಿನಿಂದ ಆರಂಭವಾಗುತ್ತದೆ ಎಂದು ಸಂಸ್ಥೆ ಇನ್ನೂ ದಿನಾಂಕ ನಿಗಧಿ ಮಾಡಿಲ್ಲ. ಆದರೆ, ಈಗಾಗಲೇ ಭಾರತೀಯ ಪಾವತಿ ನಿಗಮ, ಬ್ಯಾಂಕ್ ಪಾಲುದಾರರು ಮತ್ತು ಕೇಂದ್ರ ಸರ್ಕಾರದೊಂದಿಗೆ ನಿಕಟವಾಗಿ ಸಂಪರ್ಕದಲ್ಲಿರುವುದಾಗಿ ಸಂಸ್ಥೆ ಹೇಳಿದ್ದು, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ಹಣಕಾಸಿನ ವಹಿವಾಟುಗಳಿಗೆ ಅನುಕೂಲವಾಗುವಂತೆ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಎನ್‌ಸಿಪಿಐ ನಿಂದ WhatsApp ಅನುಮತಿಯನ್ನು ಪಡೆದಿದೆ ಎಂದು ತಿಳಿಸಿದೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)