ಅಮೆರಿಕಾ ಭೇಟಿಗೆ ಅನುಮತಿ ನಿರಾಕರಣೆ: ಸ್ಪಷ್ಟೀಕರಣ ಕೋರಿ ಕೇಂದ್ರಕ್ಕೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಅಧಿಕೃತ ಅಮೆರಿಕ ಭೇಟಿಗೆ ರಾಜಕೀಯ ಅನುಮತಿ ನಿರಾಕರಿಸಿದ್ದಕ್ಕೆ ಸ್ಪಷ್ಟನೆ ಕೋರಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರಿಗೆ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.

ನಾನು ಕರ್ತವ್ಯಬದ್ಧನಾಗಿರುವ ನನ್ನ ಕರ್ನಾಟಕದ ಜನತೆ ಕುರಿತಾದ ಹೊಣೆಗಾರಿಕೆಯ ಪ್ರಜ್ಞೆಯೊಂದಿಗೆ ಈ ನಡೆ ಅನುಸರಿಸಿದ್ದೇನೆ. ಈ ಭೇಟಿಯು ಸಹಯೋಗಗಳನ್ನು ಬಲಪಡಿಸುವುದು, ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ರಾಜ್ಯಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿತ್ತು. ಕ್ಯಾಬಿನೆಟ್ ಮಂತ್ರಿ ಹಾಗೂ ವಿಶ್ವದ ಅತಿದೊಡ್ಡ ತಂತ್ರಜ್ಞಾನ ಸಮೂಹಗಳಲ್ಲಿ ಒಂದಾಗಿರುವ ರಾಜ್ಯದ ಸಚಿವರಿಗೆ, ಯಾವುದೇ ವಿವರಣೆಯಿಲ್ಲದೆ ತನ್ನ ಅಧಿಕೃತ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ನಿರಾಕರಿಸುವುದು ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ ಎಂದು ಅನುಮತಿ ನಿರಾಕರಣೆಗೆ ಅಸಮಧಾನ ವ್ಯಕ್ತಪಡಿಸಿದರು.

ಇದು ರಾಜ್ಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಮಾತ್ರವಲ್ಲದೆ, ಸಹಕಾರಿ ಒಕ್ಕೂಟ ವ್ಯವಸ್ಥೆಯ ಚೈತನ್ಯವನ್ನು ಸಹ ಕಡೆಗಣಿಸುತ್ತದೆ.ಸಚಿವಾಲಯವು ಆದಷ್ಟು ಶೀಘ್ರವೇ ಸ್ಪಷ್ಟವಾದ ಲಿಖಿತ ಸ್ಪಷ್ಟೀಕರಣವನ್ನು ನೀಡುತ್ತದೆ ಎಂದು ನಾನು ಆಶಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Related Articles

Comments (0)

Leave a Comment