ಪೋಷಣ್ 2.0; ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿ

ಗುಜರಾತ್: ಪೋಷಣ್‌ 2.0 ಅಡಿಯಲ್ಲಿ ಮಹತ್ವದ ನವೀಕರಣವಾಗಿ, ಆಗಸ್ಟ್‌ 1ರಿಂದ ಬಯೋಮೆಟ್ರಿಕ್‌ ದೃಢೀಕರಣವನ್ನು ಬಳಸಿಕೊಂಡು ಫಲಾನುಭವಿಗಳ ನೋಂದಣಿ ಮಾಡಲಾಗುವುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಘೋಷಿಸಿದರು

ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕೇಂದ್ರ-ರಾಜ್ಯ ಸಹಯೋಗವನ್ನು ಹೆಚ್ಚಿಸುವ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಮುಖ ಯೋಜನೆಗಳ ತ್ವರಿತ ಅನುಷ್ಠಾನದ ನಿರಂತರ ಪ್ರಯತ್ನಗಳ ಭಾಗವಾಗಿ ಗುಜರಾತ್‌ನ ಕೆವಾಡಿಯಾದಲ್ಲಿ ವಲಯ ಸಭೆಯನ್ನು ಯಶಸ್ವಿಯಾಗಿ ನಡೆಸಿತು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮಿಷನ್‌ ಶಕ್ತಿ, ಮಿಷನ್‌ ವಾತ್ಸಲ್ಯ ಮತ್ತು ಮಿಷನ್‌ ಸಾಕ್ಷಮ್‌ ಅಂಗನವಾಡಿ ಮತ್ತು ಪೋಷಣ್‌ 2.0 ಅಡಿಯಲ್ಲಿನ ಪ್ರಯತ್ನಗಳ ಸಂಯೋಜನೆಯ ಸುತ್ತ ಚರ್ಚೆಗಳು ನಡೆದವು.

ದಿಕ್ಸೂಚಿ ಭಾಷಣ ಮಾಡಿದ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ,  ಪೋಷಣ್‌ 2.0 ಅಡಿಯಲ್ಲಿ ಮಹತ್ವದ ನವೀಕರಣವಾಗಿ, ಆಗಸ್ಟ್‌ 1ರಿಂದ ಬಯೋಮೆಟ್ರಿಕ್‌ ದೃಢೀಕರಣವನ್ನು ಬಳಸಿಕೊಂಡು ಫಲಾನುಭವಿಗಳ ನೋಂದಣಿಯನ್ನು ಮಾಡಲಾಗುವುದು ಎಂದು ಘೋಷಿಸಿದರು. ಇದು ಉತ್ತಮ ಗುರಿ ಮತ್ತು ಸೇವಾ ವಿತರಣೆಯನ್ನು ಖಚಿತಪಡಿಸುತ್ತದೆ. ಇದಲ್ಲದೆ, ದೇಶಾದ್ಯಂತ ರಾಜ್ಯ, ಜಿಲ್ಲೆ ಮತ್ತು ಕ್ಷೇತ್ರ ಕಾರ್ಯಕರ್ತರಿಗೆ ಜ್ಞಾನ ಮತ್ತು ಸಾಮರ್ಥ್ಯ‌ ವರ್ಧನೆ ಚೌಕಟ್ಟನ್ನು ಬಲಪಡಿಸಲು ಮಿಷನ್‌ ಸಾಕ್ಷಮ್‌ ಅಂಗನವಾಡಿ ಮತ್ತು ಪೋಷಣ್‌ 2.0 ನಲ್ಲಿ ಮೀಸಲಾದ ಕಲಿಕಾ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಐಜಿಒಟಿ ಕರ್ಮಯೋಗಿ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.

ಕುಂದುಕೊರತೆ ನಿವಾರಣಾ ಕಾರ್ಯವಿಧಾನಗಳನ್ನು ಬಲಪಡಿಸಲು, ಅಂಗನವಾಡಿಗಳಲ್ಲಿ ಸೇವೆಗಳನ್ನು ಸಮಯೋಚಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚು ಪರಿಣಾಮಕಾರಿ ಫಲಾನುಭವಿ ಗುರಿಯನ್ನು ಹೊಂದಲು ಸಚಿವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದರು.

ಮಿಷನ್‌ ಶಕ್ತಿ ಅಡಿಯಲ್ಲಿ ಒನ್‌ ಸ್ಟಾಪ್‌ ಕೇಂದ್ರಗಳು ಮತ್ತು ಮಹಿಳಾ ಸಹಾಯವಾಣಿ -181ರ ವಿಸ್ತರಣೆಯನ್ನು ಶ್ಲಾಘಿಸಿದ ಸಚಿವರು, ಹೊಸದಾಗಿ ಪ್ರಾರಂಭಿಸಲಾದ ಮಿಷನ್‌ ವಾತ್ಸಲ್ಯ ಪೋರ್ಟಲ್‌ ಅನ್ನು ನೈಜ-ಸಮಯದ ಡೇಟಾ ಎಂಟ್ರಿ ಮತ್ತು ಕಾರ್ಯಕ್ಷಮತೆಯ ಮೇಲ್ವಿಚಾರಣೆಗಾಗಿ ವಾಡಿಕೆಯ ಕಾರ್ಯಾಚರಣೆಗಳಲ್ಲಿ ಸಂಯೋಜಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದರು.

ಲಿಂಗತ್ವ ಬಜೆಟ್‌ ವಿಷಯದ ಬಗ್ಗೆ ಮಾತನಾಡಿದ ಸಚಿವರು, 2025-26ರ ಕೇಂದ್ರ ಬಜೆಟ್‌ನಲ್ಲಿ 49 ಸಚಿವಾಲಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳಿಂದ 273 ಯೋಜನೆಗಳಲ್ಲಿ 4.49 ಲಕ್ಷ  ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದು ಲಿಂಗ-ಅಂತರ್ಗತ ಆಡಳಿತಕ್ಕೆ ಸರ್ಕಾರದ ಬದ್ಧತೆಯನ್ನು ಮುನ್ನಡೆಸುತ್ತದೆ ಎಂದು ಹೇಳಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್‌, ಸರ್ಕಾರದ ಯೋಜನೆಗಳ ಯಶಸ್ಸು ಪರಿಣಾಮಕಾರಿ ತಳಮಟ್ಟದ ಅನುಷ್ಠಾನ ಮತ್ತು ಸಕ್ರಿಯ ಸಮುದಾಯ ಪಾಲ್ಗೊಳ್ಳುವಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿ ಹೇಳಿದರು.

ಮಧ್ಯಪ್ರದೇಶದ ಅನುಭವಗಳನ್ನು ಹಂಚಿಕೊಂಡ ನಿರ್ಮಲಾ ಭುರಿಯಾ, ಕೊನೆಯ ಮೈಲಿ ಸೇವಾ ವಿತರಣೆಗಾಗಿ ಸಮಗ್ರ ತಂತ್ರಜ್ಞಾನದ ಬಳಕೆಯನ್ನು ಬಿಂಬಿಸಿದರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್‌ ವ್ಯಾಪ್ತಿಯನ್ನು ವಿಸ್ತರಿಸುವ ರಾಜ್ಯದ ಬದ್ಧತೆಯನ್ನು ಪುನರುಚ್ಚರಿಸಿದರು. ರಾಜಸ್ಥಾನದ ಡಾ.ಮಂಜು ಬಾಗ್ಮಾರ್‌ ಅವರು ಹದಿಹರೆಯದ ಬಾಲಕಿಯರು ಮತ್ತು ತಾಯಂದಿರಿಗೆ ಡಿಜಿಟಲ್‌ ಪೌಷ್ಠಿಕಾಂಶ ಶಿಕ್ಷಣದ ಪ್ರಯತ್ನಗಳನ್ನು ಹಂಚಿಕೊಂಡರು ಮತ್ತು ಚರ್ಚೆಯ ಸಮಯದಲ್ಲಿ ಚರ್ಚಿಸಿದ ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳಲು ಸಿದ್ಧರಿರುವುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಅನಿಲ್‌ ಮಲಿಕ್‌, ನೈಜ-ಸಮಯದ ಡ್ಯಾಶ್‌ ಬೋರ್ಡ್‌ಗಳು ಮತ್ತು ನಾಗರಿಕರ ಪ್ರತಿಕ್ರಿಯೆ ವ್ಯವಸ್ಥೆಗಳ ಮೂಲಕ ಕಾರ್ಯಕ್ಷಮತೆಯ ಮೇಲ್ವಿಚಾರಣೆಯನ್ನು ಹೆಚ್ಚಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಿದರು. ಫಲಿತಾಂಶ ಆಧಾರಿತ ಯೋಜನೆಯಲ್ಲಿದೃಢವಾದ ಆಡಳಿತಾತ್ಮಕ ದತ್ತಾಂಶ ಮತ್ತು ಲಿಂಗ ಬಜೆಟ್‌ ಪಾತ್ರವನ್ನು ಅವರು ಒತ್ತಿ ಹೇಳಿದರು.

Related Articles

Comments (0)

Leave a Comment