10 ಸಾವಿರ ಕೋಟಿ ವೆಚ್ಚದಲ್ಲಿ ಮಾನವಸಹಿತ ಅಂತರಿಕ್ಷ ಯಾನ: ಇಸ್ರೋ ಘೋಷಣೆ
- by Suddi Team
- August 15, 2018
- 101 Views
ಬೆಂಗಳೂರು:450 ಕೋಟಿ ರೂ.ಗಳಲ್ಲಿ ಮಂಗಳನ ಅಂಗಳಕ್ಕೆ ನೌಕೆ ಕಳುಹಿಸಿದ್ದ ಇಸ್ರೋ ಇದೀಗ 10 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಮಾನವಸಹಿತ ಅಂತರಿಕ್ಷ ಯಾನಕ್ಕೆ ಮುಂದಾಗಿದೆ.2022 ಕ್ಕೆ ಮಾನವಸಹಿತ ಗಗನಯಾನ ಕೈಗೊಂಡ ರಾಷ್ಟ್ರಗಳ ಸಾಲಿನಲ್ಲಿ ಭಾರತದ ಹೆಸರು ಸೇರ್ಪಡೆಯಾಗಲಿದೆ ಎನ್ನುವ ಭರವಸೆ ನೀಡಿದೆ.
72 ನೇ ಸ್ವಾತಂತ್ರ್ಯೋತ್ಸವ ಭಾಷಣ ಮಾಡುವ ವೇಳೆ ಕೆಂಪು ಕೋಟೆ ಮೇಲೆ ನಿಂತು 2022 ಕ್ಕೆ ಮಾನವಸಹಿತ ಅಂತರಿಕ್ಷಯಾನದ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಂತೆ ಇತ್ತ ಬೆಂಗಳೂರಿನಲ್ಲಿರುವ ಅಂತರಿಕ್ಷ ಭವನದಲ್ಲಿ ಇಸ್ರೋ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮೋದಿ ಘೋಷಣೆಯನ್ನು ಸ್ವಾಗತಿಸಿತು.
ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ಮೋದಿ ಇಸ್ರೋ ಮೇಲೆ ನಂಬಿಕೆ ಇಟ್ಟು ಮಾಡಿರುವ ಘೋಷಣೆ ನನಸು ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತೇವೆ,ನಮ್ಮ ಆತ್ಮ ವಿಶ್ವಾಸವನ್ನು ಪ್ರಧಾನಿ ಹೆಚ್ಚಿಸಿದ್ದಾರೆ ಎಂದ್ರು.
ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಸಾಧ್ಯವಿದೆ,ಇದು ನಮಗೆ ನಿಜಕ್ಕೂ ಸವಾಲಿನದ್ದೇ ಆಗಿದೆ ಜೊತೆಗೆ ದೇಶದ ಘನತೆ ಕೂಡ ಹೌದು,ಇದೊಂದು ದೊಡ್ಡ ಯೋಜನೆಯಾಗಿದೆ, ತುಂಬಾ ಕೆಲಸ ಇದೆ. ಈಗಾಗಲೆ ಬೇಕಾದ ತಂತ್ರಜ್ಞಾನಗಳ ಅಭಿವೃದ್ಧಿ ಕಾರ್ಯ ನಡೀತಿದೆ.ಇನ್ನು ಪ್ರಧಾನಿಯವರ ಹೇಳಿದ ಗುರಿ ತಲುಪುವುಯೊಂದೆ ಬಾಕಿ.ಈ ಕೆಲಸ ಇಸ್ರೋದಿಂದ ಸಾಧ್ಯ . ಈಗಾಗಲೇ ಅಂತರಿಕ್ಷ ಯಾನಿಗಳಿಗೆ ಬೇಕಾದ ಜೀವರಕ್ಷಕ ಸ್ಯೂಟ್ ಅನ್ನ ನಾವೇ ಅಭಿವೃದ್ಧಿ ಪಡಿಸಿದ್ದೇವೆ. 2022ರ ಒಳಗೆ ಮಾನವ ಸಹಿತ ಅಂತರಿಕ್ಷ ಯಾತ್ರೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಮೋದಿ ಭರವಸೆಗೆ ಮುದ್ರೆ ಒತ್ತಿದ್ರು.
10 ಸಾವಿರ ಕೋಟಿಗಿಂತ ಕಡಿಮೆ ವೆಚ್ಚದಲ್ಲಿ ನಾವು ಮಾನವಸಹಿತ ಅಂತರಿಕ್ಷ ಯಾನದ ಯೋಜನೆ ತಯಾರಿಸುತ್ತೇವೆ.ಕೇವಲ ದೇಶದ ಹೆಮ್ಮೆಯ ವಿಚಾರಕ್ಕಾಗಿ ಮಾತ್ರ ನಾವು ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಮಾಡುತ್ತಿಲ್ಲ.ಈ ಉಡಾವಣೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತಷ್ಟು ಉನ್ನತ ದರ್ಜೆಗೆ ಕೊಂಡೊಯ್ಯಲಿದೆ ಎಂದು ಯೋಜನೆಯನ್ನು ಸಮರ್ಥಿಸಿಕೊಂಡ್ರು.
Related Articles
Thank you for your comment. It is awaiting moderation.


Comments (0)