ಕಾವೇರಿ ವಿಚಾರದಲ್ಲಿ ಮತ್ತೆ ಅನ್ಯಾಯ: ರಾಜ್ಯ ಬಿಟ್ಟು ಕಾವೇರಿ ಪ್ರಾಧಿಕಾರ ಸಮಿತಿ ರಚನೆ
- by Suddi Team
 - June 23, 2018
 - 391 Views
 
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಯಲ್ಲಿ ಪ್ರತಿ ಬಾರಿಯೂ ರಾಜ್ಯಕ್ಕೆ ಆಗುತ್ತಿದ್ದ ಹಿನ್ನಡೆ ಇದೀಗ ನೀರು ನಿರ್ವಹಣಾ ಮಂಡಳಿ ರಚನೆಯಲ್ಲಿಯೂ ಆಗಿದೆ.ಸಿಎಂ ಹೆಚ್ಡಿಕೆ ಮನವಿಗೆ ಸ್ಪಂಧಿಸದ ಕೇಂದ್ರ ರಾಜ್ಯವನ್ನು ಬಿಟ್ಟೇ ಸಮಿತಿ ರಚಿಸಿದೆ.
ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಯಲ್ಲಿ ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದ್ದು,ರಾಜ್ಯದ ಮನವಿಯನ್ನು ಕಡೆಗಣಿಸಿ ಸಮಿತಿ ರಚಿಸುವ ಮೂಲಕ ಕೇಂದ್ರ ಜಲ ಸಂಪನ್ಮೂಲ ಇಲಾಖೆ ರಾಜ್ಯದ ಹಿತಾಸಕ್ತಿಗೆ ಮಾರಕವಾಗುವಂತೆ ಮಾಡಿದೆ.
ರಾತ್ರೋ ರಾತ್ರಿ ಕಾವೇರಿ ಕೊಳ್ಳದ ರಾಜ್ಯಗಳ ಸದಸ್ಯರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಕೇಂದ್ರ ಜಲ ಆಯೋಗದ ಅಧ್ಯಕ್ಷ ಎಸ್. ಮಸೂದ್ ಹುಸೇನ್ ಸಮಿತಿಯ ನೇತೃತ್ವ ವಹಿಸಿರುತ್ತಾರೆ. ಮುಖ್ಯ ಎಂಜಿನಿಯರ್ ನವೀನ್ ಕುಮಾರ್ ಕೇಂದ್ರದ ಪ್ರತಿನಿಧಿಯಾಗಿರಲಿದ್ದಾರೆ. ತಮಿಳುನಾಡಿನ ಆರ್.ಸೆಂಥಿಲ್‌ಕುಮಾರ್, ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಡಾ.ಎಂ.ಮೊಹಾಪಾತ್ರ, ಕೇಂದ್ರ ಜಲ ಆಯೋಗ ಕೊಯಮತ್ತೂರು ವಿಭಾಗದ ಮುಖ್ಯ ಎಂಜಿನಿಯರ್ ಎನ್.ಎಂ.ಕೃಷ್ಣಮುನ್ನಿ,ಕೇರಳದ ಕೆ.ಎ.ಜೋಶಿ, ಪುದುಚೇರಿಯ ವಿ.ಶಣ್ಮುಗಸುಂದರಂ ಅವರನ್ನು ಸದಸ್ಯರನ್ನಾಗಿ ಕೇಂದ್ರ ಸರ್ಕಾರ ನೇಮಿಸಿದೆ.ಕೇಂದ್ರ ಕೃಷಿ ಸಚಿವಾಲಯದ (ರೈತ ಕಲ್ಯಾಣ) ತೋಟಗಾರಿಕಾ ಆಯುಕ್ತರು ಇತರೆ ಸದಸ್ಯರಾಗಿದ್ದು, ರಾಷ್ಟ್ರೀಯ ಜಲ ಆಯೋಗದ ಮತ್ತೂಬ್ಬ ಮುಖ್ಯ ಎಂಜಿನಿಯರ್ ಎ.ಎಸ್.ಗೋಯೆಲ್ ಸಮಿತಿಯ ಸದಸ್ಯ ಕಾರ್ಯದರ್ಶಿ (ಹೆಚ್ಚುವರಿ ಜವಾಬ್ದಾರಿ) ಆಗಿರುತ್ತಾರೆ.
ಆದರೆ ರಾಜ್ಯ ಸರ್ಕಾರ ತನ್ನ ಪ್ರತಿನಿಧಿಯ ಹೆಸರನ್ನು ಶಿಫಾರಸು ಮಾಡದ ಕಾರಣ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಅವರನ್ನು ಸಮಿತಿಯ ಸದಸ್ಯರೆಂದು ಪರಿಗಣಿಸಿದೆ.
ದಹಲಿ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಮಿತಿಯಲ್ಲಿನ ಕೆಲವು ಲೋಪದೋಷಗಳನ್ನು ಸರಿಪಡಿಸಿ ನಂತರ ಪ್ರಾಧಿಕಾರ ರಚಿಸಿ ಅಧಿಸೂಚನೆ ಹೊರಡಿಸಿ, ಅಲ್ಲಿಯವರೆಗೆ ರಾಜ್ಯದಿಂದ ಸಮಿತಿಗೆ ಸದಸ್ಯರನ್ನೂ ನೇಮಕ ಮಾಡುವುದಿಲ್ಲ ಎಂದಿದ್ದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)