ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಹರ್ದೀಪ್ ಸಿಂಗ್ ಪುರಿ ಅವಿರೋಧ ಆಯ್ಕೆ

ಭೋಪಾಲ್: ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಗುರುವಾರ ಚುನಾವಣಾಧಿಕಾರಿ ಉಮೇಶ್ ಶರ್ಮಾ ಅವರು ಪುರಿ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಕುಮಾರ್ ಲೋಹಾನಿ ಅಗತ್ಯ ಅಫಿಡವಿಟ್ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಪರಿಶೀಲನೆ ವೇಳೆ ಪಕ್ಷೇತರ ಅಭ್ಯರ್ಥಿ ಕಾಂತೆ ಸಾಯಣ್ಣ ಅವರ ನಾಮಪತ್ರವೂ ತಿರಸ್ಕಾರಗೊಂಡಿತ್ತು.

ಇದರಿಂದ ಕಣದಲ್ಲಿ ಹರ್ದೀಪ್ ಸಿಂಗ್ ಪುರಿ ಅವರೊಬ್ಬರೇ ಉಳಿದಿದ್ದು, ಅವಿರೋಧ ಆಯ್ಕೆಯ ಹಾದಿ ಸುಗಮವಾಯಿತು.

ಕೇಂದ್ರ ಸಚಿವ ಎಲ್. ಮುರುಗನ್ ಅವರು ರಾಜೀನಾಮೆ ನೀಡಿದ್ದರಿಂದ ಮಧ್ಯಪ್ರದೇಶದ ರಾಜ್ಯಸಭಾ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪುರಿ ಆಯ್ಕೆಯಾಗಿದ್ದಾರೆ.

ಭೋಪಾಲ್ ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಅವರು ಪುರಿ ಅವರ ಪರವಾಗಿ ಆಯ್ಕೆಯ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.

 

Related Articles

Comments (0)