137 ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಜಾರಿ; ಅಕ್ರಮ ವಸೂಲಿಗೆ ಕ್ರಮದ ಎಚ್ಚರಿಕೆ
- by Suddi Loka
- November 14, 2026
- 3 Views
ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಔಷಧಗಳ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ 137 ನಿಗದಿತವಲ್ಲದ ಕ್ಯಾನ್ಸರ್ ಔಷಧಿಗಳ ವ್ಯಾಪಾರ ಮಾರ್ಜಿನ್ಗೆ ಶೇ.30ರ ಮಿತಿ ನಿಗದಿಪಡಿಸಲಾಗಿದೆ. ನವೆಂಬರ್ 9ರಿಂದ ಪರಿಷ್ಕೃತ ದರ ಜಾರಿಯಾಗಿದ್ದು, ಕಟ್ಟುನಿಟ್ಟಿನ ಮೇಲ್ವಿಚಾರಣೆಗೆ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಸೂಚಿಸಿದೆ.
ಔಷಧ ತಯಾರಕರು, ವಿತರಕರು, ಆಸ್ಪತ್ರೆಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಹೊಸ ಬೆಲೆ ಪಾಲಿಸುವುದು ಕಡ್ಡಾಯ. ಪರಿಷ್ಕೃತ ದರಪಟ್ಟಿಯನ್ನು ಪ್ರಮುಖವಾಗಿ ಪ್ರದರ್ಶಿಸುವಂತೆಯೂ ಸೂಚಿಸಲಾಗಿದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಔಷಧ ಬೆಲೆ ನಿಯಂತ್ರಣ ಆದೇಶ-2013ರಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಈವರೆಗೆ 85 ಕಂಪನಿಗಳು 121 ಔಷಧಿಗಳ ಪರಿಷ್ಕೃತ ಎಂಆರ್ಪಿ ಪ್ರಕಟಿಸಿದ್ದು, 1,366 ಔಷಧ ಘಟಕಗಳ ಬೆಲೆ ಇಳಿಕೆಯಾಗಿದೆ. ಕೆಲವು ಔಷಧಿಗಳ ಬೆಲೆ ಗರಿಷ್ಠ ಶೇ.96.45ರಷ್ಟು ಕಡಿಮೆಯಾಗಿದೆ. ಇದರಿಂದ ರೋಗಿಗಳಿಗೆ ಸುಮಾರು ₹3,541 ಕೋಟಿ ಉಳಿತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.


Comments (0)