ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪ್ರತ್ಯೇಕ ಅಪಘಾತ: ಏಳು ಭಕ್ತರ ಸಾವು

ವಿಜಯನಗರಂ: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಭೋಗಾಪುರಂ ಹೆದ್ದಾರಿಯ ಸುಂದರಪೇಟೆ ಬಳಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದು ಐವರು ಸಾವನ್ನಪ್ಪಿದ್ದಾರೆ. ಶ್ರೀಕಾಕುಳಂ ಜಿಲ್ಲೆಯ ಶ್ರೀಮುಖ ಲಿಂಗಂ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಮೃತರನ್ನು ಬೊರ್ರಾ ಸತೀಶ್, ಪತ್ನಿ ಶ್ರುತಿ, ವಿ. ಶ್ರೀನು, ಪತ್ನಿ ಕುಸುಮ ರಂಜನಿ ಮತ್ತು ಸೂರಿಬಾಬು ಎಂದು ಗುರುತಿಸಲಾಗಿದೆ.

ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಗ್ರೀನ್‌ಫೀಲ್ಡ್ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿಯಾಗಿ ಹೈದರಾಬಾದ್‌ನ ದಂಪತಿ ಕಿಶೋರ್ ರೆಡ್ಡಿ ಮತ್ತು ಲಾವಣ್ಯ ಮೃತಪಟ್ಟಿದ್ದಾರೆ. ಅನ್ನವರಂ ದೇವಸ್ಥಾನದಿಂದ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅವರ ಪುತ್ರ ಪ್ರಣೀತ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Related Articles

Comments (0)