1 ಕೋಟಿ ಡೋಸ್ಗಳ ಗಡಿ ದಾಟಿದ HPV ಲಸಿಕೆ ಅಭಿಯಾನ; ಪ್ರಧಾನಿ ಮೋದಿ ಶ್ಲಾಘನೆ
- by Suddi Loka
- November 24, 2026
- 6 Views
ನವದೆಹಲಿ: ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ಡೋಸ್ಗಳನ್ನು ನೀಡಿರುವ ರಾಷ್ಟ್ರೀಯ HPV ಲಸಿಕೆ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದ್ದಾರೆ. ಈ ಮೂಲಕ ವಾರ್ಷಿಕ ಅರ್ಹ ಬಾಲಕಿಯರ ಪೈಕಿ ಸುಮಾರು ಶೇ.87ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ.
ಗರ್ಭಕಂಠದ ಕ್ಯಾನ್ಸರ್ನಿಂದ ಬಾಲಕಿಯರನ್ನು ರಕ್ಷಿಸುವ ಮತ್ತು ತಡೆಗಟ್ಟುವ ಆರೋಗ್ಯ ಸೇವೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಾಧನೆ ಮಹತ್ವದ ಹೆಜ್ಜೆಯಾಗಿದೆ ಎಂದು ಮೋದಿ ಬಣ್ಣಿಸಿದ್ದಾರೆ.

ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರತಿಯೊಂದು ಲಸಿಕೆ ಡೋಸ್ ಕೂಡ ಬಾಲಕಿಯರಿಗೆ ಆರೋಗ್ಯಕರ ಭವಿಷ್ಯ ಕಲ್ಪಿಸಲು ನೆರವಾಗಿದೆ ಎಂದು ಹೇಳಿದ್ದಾರೆ. ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಶ್ರಮಿಸಿದ ಎಲ್ಲ ಪಾಲುದಾರರ ಸಂಘಟಿತ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.
ದೇಶಾದ್ಯಂತ ತಡೆಗಟ್ಟುವ ಆರೋಗ್ಯ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ತೊಡಗಿರುವವರ ಸಾಮೂಹಿಕ ಬದ್ಧತೆಯನ್ನು ಈ ಮೈಲಿಗಲ್ಲು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.


Comments (0)