ಗೌರಿಶಂಕರ ಸೀರಿಯಲ್; ಶಂಕರ ಈಗ ಗೌರಿಯ ಪ್ರೈವೇಟ್ ಬಾಡಿಗಾರ್ಡ್!

ಬೆಂಗಳೂರು:ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿಶಂಕರ ಧಾರಾವಾಹಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಧಾರವಾಹಿಯಲ್ಲಿ ನಾಯಕ ಶಂಕರ ಹಾಗೂ ನಾಯಕಿ ಗೌರಿ ಕಾರಣಾಂತರಗಳಿಂದ ದೂರಾಗಿದ್ದಾರೆ. ಈ ಇಬ್ಬರು ಮತ್ತೆ ಒಂಗಾಗಬೇಕು ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ.

ಹೌದು ಶಂಕರನಿಂದ ದೂರಾದ ಬಳಿಕ ಗೌರಿ ಓದಿ ಐಎಎಸ್ ಅಧಿಕಾರಿಯಾಗಿದ್ದಾಳೆ. ಡಿಸಿ ಗೌರಿಯ ಮೇಲೆ ಹೊಟ್ಟೆಕೊಚ್ಚಿನಿಂದ ಶಂಕರನ ಮತ್ತೊಬ್ಬಳು ಪತ್ನಿ ಗಂಗಾ ಹಾಗೂ ಶಂಕರನ ಹೆತ್ತ ತಾಯಿ ಪದೇಪದೆ ಅಟ್ಯಾಕ್ ಮಾಡಿಸುತ್ತಿದ್ದಾರೆ. ಗೌರಿ ಮತ್ತವಳ ಕುಟುಂಬದ ಮೇಲೆ ಯಾರು ದಾಳಿ ನಡೆಸುತ್ತಿದ್ದಾರೆ ಎಂದು ತಿಳಿಯದೆ ಗೌರಿಯ ಮಗಳಿಗಾಗಿ ಶಂಕರ ಪ್ರೈವೇಟ್ ಬಾಡಿಗಾರ್ಡ್ ಆಗಿ ಗೌರಿಯ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.

ಮಗಳ ಜತೆ ಉತ್ತಮ ಒಡನಾಟ ಹೊಂದಿರುವ ಶಂಕರ ಅದನ್ನು ಗೌರಿ ಮುಂದೆ ತೋರಿಸಿಕೊಳ್ಳಿವುದಿಲ್ಲ. ಒಬ್ಬರಿಗೊಬ್ಬರು ಪರಿಚಯವೇ ಇಲ್ಲದವರಂತೆ ಅಪ್ಪ, ಮಗಳು ಗೌರಿಯನ್ನು ಯಾಮಾರಿಸುತ್ತಿದ್ದಾರೆ. ಶಂಕರನನ್ನು ಮನೆಯಲ್ಲೇ ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ, ನನಗೆ ಇಲ್ಲಿರೋಕೆ ಇಷ್ಟ‌ ಇಲ್ಲ. ಇಲ್ಲಿ ಯಾರ್ಯಾರೋ ಬಂದು ಗಲಾಟೆ ಮಾಡ್ತಾರೆ, ನನಗೆ ಭಯ ಆಗ್ತಿದೆ ಅಂತ ಗೌರಿ ಮಗಳು ಭುವಿ ಹಠ ಹಿಡಿದು ಊಟ ಬಿಟ್ಟು ಕೂತಿದಾಳೆ. ಇದೇ ಸಮಯಕ್ಕೆ ಬಂದ ಶಂಕರ ಭುವಿಗೆ ಪ್ರೀತಿಯಿಂದ ಊಟ ಮಾಡಿಸುತ್ತಾನೆ. ಅಯ್ಯೋ ಇವನು ನನ್ನ ಮಗಳನ್ನ ನೋಡೇ ಬಿಟ್ನಲ್ಲ ಅಂತ ಗೌರಿ ಗಾಬರಿಯಾಗಿದ್ದಾಳೆ.

ಅತ್ತ ಶಂಕರನ ಮನೆಯಲ್ಲಿ ಹೆತ್ತ ತಾಯಿ, ಸಾಕು ತಾಯಿ ಮದ್ಯೆ ಕೋಲ್ಡ್ ವಾರ್ ಜೋರಾಗಿದೆ. ಹೆತ್ತ ತಾಯಿ ಭೈರವಿ, ಶಂಕರ ನನಗೆ ಹೇಳದೆ ಹೋಗಿದ್ದಾನೆ ಅಂತ ಪೆಚಾಡ್ತಿದ್ರೆ, ಸಾಕು ತಾಯಿ ಸುನಂದ, ಶಂಕರ ನನ್ನ ಆಶೀರ್ವಾದ ಪಡೆದು ಹೋಗಿದ್ದಾನೆ. ಅವನ ಮೇಲೆ ಸದಾ ನನ್ನ ಆಶೀರ್ವಾದ ಇರುತ್ತೆ ಅಕ್ಕ ಅಂತ ಬೈರವಿ ಮುಂದೆ ಹೇಳಿ ಹೊಟ್ಟೆ ಉರಿಸ್ತಿದಾಳೆ. ಇಲ್ಲಿಗೆ ಇವತ್ತಿನ ಸಂಚಿಕೆ ಮುಗಿದಿದೆ.

 

Related Articles

Comments (0)

Leave a Comment