ಬಾಕ್ಸ್ ಆಫೀಸ್ನಲ್ಲಿ ಅಬ್ಬರ: ಒಂದೂವರೆ ಸಾವಿರ ಕೋಟಿ ಕ್ಲಬ್ ಸೇರಲಿರುವ ‘ರಾಮಾಯಣ’
- by Suddi Loka
- November 17, 2026
- 19 Views
ಬೆಂಗಳೂರು: ಬಿಡುಗಡೆಯಾಗಿ 12 ದಿನ ಪೂರೈಸಿರುವ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಾಲೋಟ ಮುಂದುವರಿಸಿದ್ದು, ವಿಶ್ವಾದ್ಯಂತ ₹1,437.25 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
12ನೇ ದಿನ ಭಾರತದಲ್ಲಿ ₹32 ಕೋಟಿ ನೆಟ್ ಗಳಿಸಿದೆ. ಭಾನುವಾರದ ₹75 ಕೋಟಿ ಗಳಿಕೆಗೆ ಹೋಲಿಸಿದರೆ ಸೋಮವಾರ ಶೇ.57.3ರಷ್ಟು ಇಳಿಕೆಯಾಗಿದೆ. ದೇಶಾದ್ಯಂತ 22,395 ಪ್ರದರ್ಶನಗಳಲ್ಲಿ ಪ್ರತಿ ಶೋಗೆ ಸರಾಸರಿ ₹14,289 ಗಳಿಕೆ ದಾಖಲಾಗಿದೆ.
ಭಾಷಾವಾರು ಗಳಿಕೆಯಲ್ಲಿ ಹಿಂದಿ ₹23.75 ಕೋಟಿ, ಮಲಯಾಳಂ ₹2.85 ಕೋಟಿ, ಕನ್ನಡ ₹2 ಕೋಟಿ, ತಮಿಳು ₹1.90 ಕೋಟಿ ಹಾಗೂ ತೆಲುಗು ₹1.50 ಕೋಟಿ ಸಂಗ್ರಹಿಸಿದೆ.

ಇದರೊಂದಿಗೆ ಭಾರತದಲ್ಲಿ ಒಟ್ಟು ನೆಟ್ ಗಳಿಕೆ ₹792.60 ಕೋಟಿ ಮತ್ತು ಗ್ರಾಸ್ ಕಲೆಕ್ಷನ್ ₹947.25 ಕೋಟಿಗೆ ತಲುಪಿದೆ. ವಿದೇಶಿ ಮಾರುಕಟ್ಟೆಯಲ್ಲಿ 12ನೇ ದಿನ ₹10 ಕೋಟಿ ಗ್ರಾಸ್ ಗಳಿಸಿದ್ದು, ಒಟ್ಟು ವಿದೇಶಿ ಗಳಿಕೆ ₹490 ಕೋಟಿ ಆಗಿದೆ.
ಮೊದಲ ಎಂಟು ದಿನಗಳಲ್ಲಿ ಭಾರತದಲ್ಲಿ ₹564.60 ಕೋಟಿ ನೆಟ್ ಗಳಿಸಿದ್ದ ಚಿತ್ರ, ಎರಡನೇ ವಾರದ ನಾಲ್ಕು ದಿನಗಳಲ್ಲಿ ₹228 ಕೋಟಿ ಗಳಿಸಿದೆ.


Comments (0)