ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ರಾಮ್ ಚರಣ್ ತೇಜ
- by Suddi Team
- September 1, 2025
- 78 Views

ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತೆಲುಗು ನಟ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜ ನಟನೆಯ ಪೆದ್ದಿ ಚಿತ್ರದ ಹಾಡಿನ ಚಿತ್ರೀಕರಣ ಭರದಿಂದ ಸಾಗಿದೆ.ಅದ್ದೂರಿ ಸೆಟ್ ನಲ್ಲಿ ಸಾವಿರ ಡ್ಯಾನ್ಸರ್ಸ್ ಒಳಗೊಂಡ ಸಾಂಗ್ ಶೂಟಿಂಗ್ ನಡೆಯುತ್ತಿದೆ.
ಚಿತ್ರೀಕರಣದ ಬಿಡುವಿನ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಮ್ ಚರಣ್ ತೇಜ ಕೆಲ ಸಮಯ ಅನೌಪಚಸರಿಕ ಮಾತುಕತೆ ನಡೆಸಿದರು. ಚಿತ್ರೀಕರಣದಲ್ಲಿನ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ.
ರಾಮ್ ಚರಣ್ ಅವರ ‘ಪೆದ್ದಿ’ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಅದ್ಧೂರಿ ಸೆಟ್ ಹಾಕಿ ಮಾಸ್ ಹಾಡೊಂದನ್ನು ಚಿತ್ರತಂಡ ಶೂಟಿಂಗ್ ಮಾಡುತ್ತಿದೆ. ಒಂದು ಸಾವಿರ ಡ್ಯಾನ್ಸರ್ಸ್ ಜೊತೆ ರಾಮ್ ಚರಣ್ ಹಾಡಿಗೆ ಹೆಜ್ಜೆ ಹಾಕಿದ್ದು, ಅದ್ಧೂರಿಯಾಗಿ ದೊಡ್ಡ ಬಜೆಟ್ನಲ್ಲಿ ಈ ಸಾಂಗ್ನ ಚಿತ್ರೀಕರಣವನ್ನು ಮಾಡಲಾಗುತ್ತಿದೆ.
ಅಂದ ಹಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಪೆದ್ದಿಯಲ್ಲಿ ಗೌರ ನಾಯ್ಡು ಎಂಬ ರೋಲ್ ನಿಭಾಯಿಸುತ್ತಿದ್ದಾರೆ. ಸಿನಿಮಾ 2026ರ ಮಾರ್ಚ್ನಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
Related Articles
Thank you for your comment. It is awaiting moderation.
Comments (0)