ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಕಿಚ್ಚ ಸುದೀಪ್; ಬಿಗ್ ಬಾಸ್ ಡೇಟ್ ರಿವೀಲ್..!

ಬೆಂಗಳೂರು: ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೂ ಮುನ್ನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಬೆಳ್ಳಿ ತೆರೆ ಮೇಲೆ ಸಿಗುವ ಜತೆಗೆ ಕಿರುತೆರೆಯಲ್ಲೂ ಬರುವುದಾಗಿ ತಿಳಿಸಿದ್ದಾರೆ.ಬಿಗ್ ಬಾಸ್ ಟೀಂ ಅಧಿಕೃತವಾಗಿ ಪ್ರಕಟಿಸುವ ಮೊದಲೇ ಬಿಗ್ ಬಾಸ್ ಸೀಜನ್ 12 ರ ಡೇಟ್ ರಿವೀಲ್ ಮಾಡಿದ್ದಾರೆ.

ಮೈಸೂರಿನಲ್ಲಿ ನಡೆದ ನಿರ್ಮಾಪಕ ಸಂದೇಶ ನಾಗರಾಜ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸುದೀಪ್,ಅಭಿಮಾನಿಗಳ ಅಭಿಮಾನದ ಶಿಳ್ಳೆ,ಚಪ್ಪಾಳೆಗೆ ಸ್ಪಂದಿಸಿ ಆದಷ್ಟು ಬೇಗ ಬಿಗ್ ಸ್ಕ್ರೀನ್ ಮೇಲೆ ಸಿಗೋಣ ಎನ್ನುವ ಬಿಗ್ ಮೆಸೇಜ್ ನೀಡಿದರು. ಅಷ್ಟು ಮಾತ್ರವಲ್ಲದೆ ಸೆಪ್ಟಂಬರ್ 28 ರಿಂದ ಕಿರುತೆರೆಯಲ್ಲಿ ಬರುತ್ತೇನೆ ಎನದನುವ ಮೂಲಕ ಕನ್ನಡ ಕಿರುತೆರೆಯ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಸೀಜನ್ 12 ರ ಡೇಡ್ ನ ರಿವೀಲ್ ಮಾಡಿದರು.

ಬಿಗ್ ಬಾಸ್ ಸೀಜನ್ 11 ರ ನಡುವೆಯೇ ಬಿಗ್ ಬಾಸ್ ಗೆ ಗುಡ್ ಬೈ ನಿರ್ಧಾರ ಪ್ರಕಟಿಸಿದ್ದ ಕಿಚ್ಚ, ಬಿಗ್ ಬಾಸ್ ಪ್ರಿಯರು ಮತ್ತು ತಮ್ಮ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದರು ನಂತೆ ಸೀಜನ್ 12ಕ್ಕೆ ಕಮ್ ಬ್ಯಾಕ್ ಮಾಡುವ ನಿರ್ಧಾರದ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದ ಕಿಚ್ಚ ಸುದೀಪ್ ಇದೀಗ ಟಿವಿಯಲ್ಲಿ ಬಿಗ್ ಬಾಸ್ ಪ್ರಸಾರದ ದಿನಾಂಕವನ್ನ ಪ್ರಕಟಿಸಿ ಖುಷಿ ಹೆಚ್ಚಿಸಿದ್ದಾರೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಬಿಗ್ ಬಾಸ್ ಡೇಟ್ ಪ್ರಕಟಿಸಲಾಗುತ್ತದೆ ಎನ್ನಲಾಗಿತ್ತು ಆದರೆ ಅದಕ್ಕೂ ಮುನ್ನವೇ ಸುದೀಪ್ ಡೇಟ್ ರಿವೀಲ್ ಮಾಡಿದ್ದಾರೆ.

Related Articles

Comments (0)

Leave a Comment