ಬೆಂಗಳೂರು ಎಂಐಟಿ ವಿದ್ಯಾರ್ಥಿಗೆ ಸಿಕ್ಕಿದೆ ₹52 ಲಕ್ಷ ಪ್ಯಾಕೇಜ್ ಉದ್ಯೋಗ
- by Suddi Team
- June 30, 2025
- 230 Views

ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ), ಬೆಂಗಳೂರು ಕ್ಯಾಂಪಸ್‌ನ ಅತ್ಯುತ್ತಮ ಸಂಸ್ಥೆಯಾಗಿರುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), NIRF 2024 ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದ್ದು, ಈ ವರ್ಷ ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅದ್ಭುತ ಫಲಿತಾಂಶವನ್ನು ಸಾಧಿಸಿದೆ.
ಇಸಿ ವಿಭಾಗದ ಬಿ.ಟೆಕ್ ವಿದ್ಯಾರ್ಥಿ ವಿಜ್ವಲ್ ನಾರಾಯಣ ಅವರು ₹52 ಲಕ್ಷ ರೂಪಾಯಿ ವೇತನದ ನೌಕರಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಎಂಐಟಿ ಬೆಂಗಳೂರಿನ ಮೊದಲ ಪದವಿ ಬ್ಯಾಚ್‌ಗೆ ಮಹತ್ವದ ಮೈಲಿಗಲ್ಲಾಗಿದೆ.
ಇದರ ಜತೆಗೆ ವಿವಿಧ ವಿಭಾಗ ವಿದ್ಯಾರ್ಥಿಗಳೂ ಹೆಚ್ಚಿನ ವೇತನದ ಪ್ಯಾಕೇಜ್‌ಗಳನ್ನು ಪಡೆದಿದ್ದು ಅವುಗಳಲ್ಲಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರದ್ಯೋತ ಕೀರ್ತಿಕರ್ ಅವರ ₹22 ಲಕ್ಷದ ಪ್ಯಾಕೇಜ್, ಸಿಎಸ್ಇ – AI & ಸೈಬರ್ ಸೆಕ್ಯುರಿಟಿ ವಿಭಾಗದ ಹಿಮವರ್ಷಿಣಿ ಬೀಡಾಲ ಮತ್ತು ಶ್ರೀಯಾ ಖೇರಾ ಅವರ ₹18.6 ಲಕ್ಷದ ಪ್ಯಾಕೇಜ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಪಿ. ಯಾಸ್ಮೀನ್ ಬೇಗಂ ಅವರ ₹15 ಲಕ್ಷದ ಪ್ಯಾಕೇಜ್‌ಗಳು ಪ್ರಮುಖವಾದವು.
ಮಾಹೆ ಬೆಂಗಳೂರು ಕ್ಯಾಂಪಸ್‌ನ ಪ್ರೊ-ವೈಸ್-ಚಾನ್ಸೆಲರ್ ಪ್ರೊ. (ಡಾ) ಮಧು ವೀರರಾಘವನ್, “ಸಾಂಪ್ರದಾಯಿಕ ಶಿಕ್ಷಣವನ್ನು ಮೀರಿ ವೃತ್ತಿಪರರನ್ನು ಸಿದ್ಧಪಡಿಸುವ ಬಗ್ಗೆಯೇ ನಾವು ಹೆಚ್ಚು ಗಮನ ಹರಿಸುತ್ತೇವೆ. ಆಧುನಿಕ ಮಾರುಕಟ್ಟೆ ಬೇಡಿಕೆಗೆ ಸರಿಹೊಂದುವ ಪಠ್ಯಕ್ರಮವನ್ನು ರೂಪಿಸುವ ಹಾಗು ಪ್ರಾಯೋಗಿಕ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿ ಪಡಿಸುವ ಮೂಲಕ, ನಮ್ಮ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮವಾಗಿ ಸ್ಪರ್ಧಿಸಲು ತಯಾರಾಗಿದ್ದಾರೆಯೇ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಅದಕ್ಕೆ ನಮ್ಮಲ್ಲಿ ಆಗುವ ಕ್ಯಾಂಪಸ್ ಆಯ್ಕೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಸಿಕ್ಕ ಪ್ಯಾಕೇಜ್‌ಗಳು ಸಾಕ್ಷಿಯಾಗಿದೆ” ಎಂದು ಹೇಳಿದರು.
ಈ ಕ್ಯಾಂಪಸ್ ಆಯ್ಕೆ ಬಗ್ಗೆ ಮಾತನಾಡಿದ ಎಂಐಟಿ ಬೆಂಗಳೂರಿನ ನಿರ್ದೇಶಕ ಡಾ. ಐವೆನ್ ಜೋಸ್, “ಎಂಐಟಿ ಬೆಂಗಳೂರಿನಲ್ಲಿ, ಸಮಯಕ್ಕೆ ತಕ್ಕಂತೆ ನವೀಕರಣಗೊಳ್ಳುವುದರ ಜತೆಗೆ ಈಗಿನ ಉದ್ಯಮ ಕ್ಷೇತ್ರಕ್ಕೆ ಅಗತ್ಯವಿರುವ ಕಲಿಕಾ ವ್ಯವಸ್ಥೆ ನಮ್ಮಲ್ಲಿ ಇದೆ. ಪ್ರತಿಷ್ಠಿತ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸ್ಟಾರ್ಟ್-ಅಪ್ ಎಲ್ಲವೂ ನಮ್ಮ ಸಂಸ್ಥೆ ಜತೆಗೆ ಉತ್ತಮ ಸಂಬಂಧ ಇರುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ವಿಷಯದ ಕುರಿತು ಸಮಗ್ರ ಜ್ಞಾನ ದೊರೆಯುತ್ತದೆ. ಸುಧಾರಿತ ಮೂಲಸೌಕರ್ಯ, ಅಂತರಶಿಸ್ತೀಯ ಕೆಲಸಗಳು ಮತ್ತು ಉತ್ತಮ ಅಧ್ಯಾಪಕರ ವರ್ಗ ಇರುವುದರಿಂದ ನಮ್ಮಲ್ಲಿ ಕಲಿಯುವ ವಿದ್ಯಾರ್ಥಿಗಳು ನೈಜ-ಪ್ರಪಂಚದ ಸವಾಲುಗಳ ಬಗ್ಗೆ ಕೆಲಸ ಮಾಡಿ ಅದರ ಅನುಭವನ್ನು ಪಡೆಯುವುದರಿಂದಲೇ ಒಳ್ಳೆಯ ಉದ್ಯೋಗವನ್ನು ಪಡೆಯುತ್ತಿದ್ದಾರೆ” ಎಂದರು.
ಇಂಟರ್ನ್‌ಶಿಪ್ ಡ್ರೈವ್‌ನಲ್ಲಿಯೂ ಎಂಐಟಿ ಬೆಂಗಳೂರು ವಿದ್ಯಾರ್ಥಿಗಳು ಅತ್ಯುತ್ತಮ ಸ್ಟೈಫಂಡ್ ಪಡೆದಿದ್ದಾರೆ:
₹1.1 LPA – ಅತ್ಯಧಿಕ ಇಂಟರ್ನ್‌ಶಿಪ್ ಸ್ಟೈಫಂಡ್
₹38 KPM – ಸರಾಸರಿ ಸ್ಟೈಫಂಡ್
₹30 KPM – ಸರಾಸರಿ ಸ್ಟೈಫಂಡ್
250ಕ್ಕೂ ಹೆಚ್ಚು ಕಂಪನಿಗಳು ಭಾಗಿ:
ತಂತ್ರಜ್ಞಾನ, ಸಲಹಾ, ಆರೋಗ್ಯ ರಕ್ಷಣೆ, ಇಂಧನ ಮತ್ತು ಹಣಕಾಸು ಮುಂತಾದ ಕ್ಷೇತ್ರಗಳಲ್ಲಿ ವ್ಯಾಪಿಸಿರುವ 250ಕ್ಕೂ ಹೆಚ್ಚು ಕಂಪನಿಗಳು ಈ ಪ್ಲೇಸ್‌ಮೆಂಟ್‌ನಲ್ಲಿ ಭಾಗವಹಿಸಿ ಪ್ರಮುಖ ಕಂಪನಿಗಳು ಸೇರಿದ್ದು, ಮೈಕ್ರೋಸಾಫ್ಟ್, ಅಮೆಜಾನ್, ಮೆಕಿನ್ಸೆ & ಕಂಪನಿ, ಕೊಂಪ್ರೈಸ್, ಆಪ್ಟಮ್, ಸವಿಯಂಟ್, ಶೆಲ್, HPE, ಇನ್ಫೋಸಿಸ್, TCS, ಇಂಟೆಲ್, ಗೋಲ್ಡ್‌ಮನ್ ಸ್ಯಾಚ್ಸ್, ಫಿಲಿಪ್ಸ್, ಯೂನಿಲಿವರ್, ಡೆಲ್, ಕ್ಯಾಪ್‌ಜೆಮಿನಿ, ಸ್ವಿಗ್ಗಿ, ಲುಮಿಕ್, ಬ್ಲ್ಯಾಕ್‌ರಾಕ್, ಕಾಗ್ನಿಜೆಂಟ್, ಸೀಮೆನ್ಸ್ ಹೆಲ್ತ್‌ನಿಯರ್ಸ್ ಇತ್ಯಾದಿ.
Related Articles
Thank you for your comment. It is awaiting moderation.
Comments (0)