ಮಹೀಂದ್ರಾ ಎಕ್ಸ್‌ಯುವಿ 500 ನೂತನ ಕಾರು ಬಿಡುಗಡೆ
- by Suddi Team
 - June 16, 2018
 - 101 Views
 
ಬೆಂಗಳೂರು:ಮಹೀಂದ್ರಾದಿಂದ ಪ್ಲಶ್ ನ್ಯೂ ಎಕ್ಸ್‍ಯುವಿ500 ನೂತನ ಕಾರು ನಗರದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಪ್ರೀಮೀಯಂ ಎಸ್‍ಯುವಿ ವರ್ಗದಲ್ಲಿ ನೂತನ ಮೈಲುಗಲ್ಲಾಗಿದ್ದು, ಆಕರ್ಷಕ ದೃಢವಾದ ವಿನ್ಯಾಸ, ಉತ್ತಮ ಒಳಾಂಗಣ, ಎತ್ತರಿಸಿದ ಸಾಮಥ್ರ್ಯ, ಟಾರ್ಕ್, ಉನ್ನತೀಕರಿಸಿದ ದೃಢತೆ ಹೊಂದಿದ ನೂತನ ಕಾರಿನ ದರ ಎಕ್ಸ್ ಷೋರೂಂ ದರ 12.36 ಲಕ್ಷದಿಂದ ಆರಂಭಗೊಳ್ಳಲಿದೆ.
ಮುಂದಿನ ಭಾಗದಲ್ಲಿ ಕ್ರೋಮ್ ಲೇಪಿತ ನೂತನ ಗ್ರಿಲ್, ಹೊಸ ಎಲ್‍ಇಡಿ ಡಿಆರ್‍ಎಲ್‍ಗಳು, ಫಾಗ್ ಲ್ಯಾಂಪ್‍ಗಳು, ಹೊಸತರದ ಕ್ರೋಮ್ ಬೆಜೆಲ್, ನೂತನ ಡೈಮಂಡ್ ಕಟ್‍ನ 45.72 ಸೆಂಟಿ ಮೀಟರ್‍ನ (235/60ಆರ್ 18) ಅಲಾಯ್ ವ್ಹೀಲ್‍ಗಳು, ನೂತನ ಮರುವಿನ್ಯಾಸದ ಟೇಲ್‍ಗೇಟ್, ಸ್ಪಿಲ್ಟ್ ಟೇಲ್ ಲ್ಯಾಂಪ್‍ಗಳು, ನೂತನ ಹಿಂಬದಿಯ ಸ್ಪಾಯಲರ್‍ಗಳು.
ಹೊಸ ಆಕರ್ಷಕ ಮತ್ತು ಪ್ಲಶ್‍ಗಳು:
ಕಪ್ಪು ಮತ್ತು ಟ್ಯಾನ್‍ನ ಒಳಾಂಗಣ, ನೂತನ ಸೀಟುಗಳು, ಆಕರ್ಷಕವಗಿ ರೂಪಿಸಿದ ಸಾಫ್ಟ್ ಟಚ್ ಲೆದರ್‍ನ ಡ್ಯಾಶ್‍ಬೋಡ್ಸ್, ಬಾಗಿಲುಗಳ ಟ್ರಿಮ್ಸ್, ಪಿಯಾನೊ ಬ್ಲಾಕ್ ಕನ್‍ಸೋಲ್.
ಅತ್ಯುತ್ತಮ ಹೈಟೆಕ್ ಸೌಲಭ್ಯಗಳು:
ಎಲೆಕ್ಟ್ರಿಕ್ ಸನ್‍ರೂಫ್, ಉನ್ನತ ದರ್ಜೆಯ ಒಆರ್‍ವಿಎಂ ಲೊಗೊ ಪ್ರಾಜೆಕ್ಷನ್ ಲ್ಯಾಂಪ್‍ಗಳು, ನೂತನ ಸ್ಮಾರ್ಟ್ ವಾಚ್ ಸಂಪರ್ಕ. 18 ಸೆಂಟಿ ಮೀಟರ್‍ನ (7 ಇಂಚು) ಟಚ್ ಸ್ಕ್ರೀನ್ ಇನ್‍ಫೋಟೇನ್‍ಮೆಂಟ್ ಮತ್ತು ಜಿಪಿಎಸ್ ನೇವಿಗೇಷನ್, ಅರ್ಕಮಿಸ್, ಎತ್ತರಿಸಿದ ಆಡಿಯೊ, ಅಂಡ್ರಾಯ್ಡ್ ಆಟೊ, ಉದ್ಯಮದಲ್ಲಿಯೇ ಮೊದಲ ಬಾರಿಗೆ ಪ್ರಶಸ್ತಿ ಪುರಸ್ಕøತ ಅಪ್ಲಿಕೇಷನ್‍ಗಳು, ಎಕೊಸೆನ್ಸ್ ಟೆಕ್ನಾಲಜಿ ಮತ್ತು ಇತರೆ ಸೌಲಭ್ಯಗಳಿವೆ.
ನೂತನ ಎಕ್ಸ್‍ಯುವಿ500 ನಿರಂತರವಾಗಿ ಅತ್ಯುತ್ತಮ ಸುರಕ್ಷತಾ ಕ್ರಮಗಳನ್ನು ನೀಡಲಿದ್ದು, 6 ಏರ್‍ಬ್ಯಾಗ್‍ಗಳು, ಎಬಿಎಸ್ ಮತ್ತು ಇಬಿಒ, ಹಿಲ್ ಹೋಲ್ಡ್, ಹಿಲ್ ಡಿಸೆಂಟ್ ಕಂಟ್ರೋಲ್, ತುರ್ತು ಸಂದರ್ಭದಲ್ಲಿ ಕರೆ ವ್ಯವಸ್ಥೆ, ಡಿಸ್ಕ್ ಬ್ರೇಕ್, ಸೇರ ಇನ್ನೂ ಅನೇಕ ಸೌಲಭ್ಯಗಳು ಇವೆ.
ಡೀಸೆಲ್‍ನಲ್ಲಿ ಐದು ಮಾದರಿ ಹಾಗೂ 45.72 ಸೆಂಟಿ ಮೀಟರ್‍ನ ಅಲಾಯ್ ವ್ಹೀಲ್, 1 ಪೆಟ್ರೋಲ್ ಮಾದರಿ ಲಭ್ಯವಿದೆ. ಗ್ರಾಹಕರು ಏಳು ಆಕರ್ಷಕ ಬಣ್ಣಗಳಲ್ಲಿ ಅಂದರೆ ನ್ಯೂ ಕ್ರಿಮ್ಸನ್ ರೆಡ್, ನ್ಯೂ ಮೆಜೆಸ್ಟಿಕ್ ಕೂಪರ್, ಪರ್ಲ್ ವೈಟ್, ವಾಲ್ಕನೊ ಬ್ಲ್ಯಾಕ್, ಮೂನ್ ಡಸ್ಟ್ ಸಿಲ್ವರ್, ಒಪುಲೆಂಟ್ ಪರ್ಪಲ್ ಮತ್ತು ಲೇಕ್‍ಸೈಡ್ ಬ್ರೌನ್ ಇದೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)