ದಾವೋಸ್ 2026 |  ಮೆನ್ಜೀಸ್ ಏವಿಯೇಷನ್ ಜೊತೆ US$ 10 ಮಿಲಿಯನ್ ಹೂಡಿಕೆ ಚರ್ಚೆ

ದಾವೋಸ್: ವಿಶ್ವ ಆರ್ಥಿಕ ಶೃಂಗದಲ್ಲಿ ರಾಜ್ಯದಲ್ಲಿ ಹೂಡಿಕರ ಮಾಡುವಂತೆ ವಿದೇಶಿ ಕಂಪನಿಗಳಿಗೆ ಅಧಿಕೃತ ಆಹ್ವಾನ ನೀಡಲಾಗುತ್ತಿದ್ದು,ಮೆನ್ಜೀಸ್ ಏವಿಯೇಷನ್ ಜೊತೆ US$ 10 ಮಿಲಿಯನ್ ಹೂಡಿಕೆ ಚರ್ಚೆ ನಡೆದಿದೆ. ಇದು ಫಲಪ್ರದವಾದಲ್ಲಿ ರಾಜ್ಯಕ್ಕೆ ದೊಡ್ಡ ಹೂಡಿಕೆ ಹರಿದುಬರಲಿದೆ.

ಕರ್ನಾಟಕದಲ್ಲಿ ವಿಸ್ತರಿಸುತ್ತಿರುವ Menzies Aviation (ಮೆನ್ಜೀಸ್ ಏವಿಯೇಷನ್) ಹಾದಿಯ ಕುರಿತು, ಕಂಪನಿಯ ಕಾರ್ಯಾಧ್ಯಕ್ಷ ಹಸ್ಸನ್ ಎಲ್ ಹೌರಿ ಅವರೊಂದಿಗೆ ದಾವೋಸ್ ನಲ್ಲಿ ಸಚಿವ ಎಂಬಿ ಪಾಟೀಲ್ ನೇತೃತ್ವದ ರಾಜ್ಯದ ಸರ್ಕಾರದ ನಿಯೋಗ ಮಹತ್ವದ ಸಭೆ ನಡೆಸಿತು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೆನ್ಜೀಸ್ ನ ಜಾಗತಿಕ ಕಾರ್ಗೋ ವ್ಯವಹಾರದಲ್ಲಿ ಶೇ.10ರಷ್ಟು ಪಾಲು ಹೊಂದಿರುವುದು, ಬೆಂಗಳೂರಿನ ತಂತ್ರಾತ್ಮಕ ಶಕ್ತಿ ಮತ್ತು ಜಾಗತಿಕ ಸ್ಥಾನಮಾನವನ್ನು ಮತ್ತೊಮ್ಮೆ ದೃಢಪಡಿಸುತ್ತದೆ.ಈ ವಿಶ್ವಾಸದ ಮುಂದುವರಿಕೆಯಾಗಿಯೇ, ಈಗಾಗಲೇ USD 25 ಮಿಲಿಯನ್ ಹೂಡಿಕೆಯ ಜೊತೆಗೆ, ಗ್ರೌಂಡ್ ಹ್ಯಾಂಡ್ಲಿಂಗ್ ಹಾಗೂ ಹೊಸ ಬ್ರಿಡ್ಜ್ ಮೌಂಟಿಂಗ್ ಯೋಜನೆಗಳಿಗೆ ಇನ್ನೂ USD 10ಮಿಲಿಯನ್ ಹೂಡಿಕೆಯ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

ಇದರ ಜೊತೆಗೆ, ರಾಜ್ಯದಲ್ಲಿರುವ 400ಕ್ಕೂ ಹೆಚ್ಚು ಫಾರ್ಚೂನ್ 500 ಕಂಪನಿಗಳ ಬಲಿಷ್ಠ ವ್ಯವಹಾರ-ಪ್ರತಿಭಾ ಪರಿಸರವನ್ನು ಬಳಸಿಕೊಂಡು, ಕರ್ನಾಟಕದಲ್ಲಿ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ (GCC) ಅಥವಾ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಯ ಅವಕಾಶಗಳನ್ನೂ ಅನ್ವೇಷಿಸಲಾಯಿತು ಎಂದರು.

ಕರ್ನಾಟಕದಲ್ಲಿ ಮೆನ್ಜೀಸ್ ಏವಿಯೇಷನ್ ನ ನಿರಂತರ ಬೆಳವಣಿಗೆ ಮತ್ತು ಭವಿಷ್ಯದ ಹೂಡಿಕೆಗಳಿಗೆ ಸರ್ಕಾರದಿಂದ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಒದಗಿಸಲಾಗುವುದೆಂದು ಭರವಸೆಯನ್ನು ನೀಡಿದೆ ಆ ಮೂಲಕ ಹೂಡಿಕೆ ಆಕರ್ಷಣೆ ಮಾಡಲಾಗುತ್ತಿದೆ ಎಂದರು.

Related Articles

Comments (0)

Leave a Comment