ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಿಗೆ ಶುಭ ಕೋರಿದ ವಿಜಯೇಂದ್ರ,ಕುಮಾರಸ್ವಾಮಿ
- by Suddi Team
- January 20, 2026
- 10 Views
ನವದೆಹಲಿ: ನಿತಿನ್ ನಬೀನ್ ಅವರ ಸೈದ್ಧಾಂತಿಕ ಬದ್ಧತೆ, ಕ್ರಿಯಾಶೀಲ ನಾಯಕತ್ವ, ಸುದೀರ್ಘ ರಾಜಕೀಯ ಅನುಭವ ಹಾಗೂ ತಲಸ್ಪರ್ಶಿ ಸಂಘಟನಾ ಸಾಮರ್ಥ್ಯವು ಪಕ್ಷವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಜಯೇಂದ್ರ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದ ನಿತಿನ್ ನಬೀನ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.ತಮ್ಮ ನಾಯಕತ್ವದಲ್ಲಿ ಸಂಘಟನೆಯ ವಿಜಯದ ಪಥವನ್ನು ಮತ್ತಷ್ಟು ವಿಸ್ತರಿಸಲು ನಾವು ಶಕ್ತಿಮೀರಿ ಶ್ರಮಿಸುವ ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ.
ತಮ್ಮ ಸೈದ್ಧಾಂತಿಕ ಬದ್ಧತೆ, ಕ್ರಿಯಾಶೀಲ ನಾಯಕತ್ವ, ಸುದೀರ್ಘ ರಾಜಕೀಯ ಅನುಭವ ಹಾಗೂ ತಲಸ್ಪರ್ಶಿ ಸಂಘಟನಾ ಸಾಮರ್ಥ್ಯವು ಪಕ್ಷವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲಿದೆ ಎಂಬ ಅಚಲ ವಿಶ್ವಾಸ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಇದೆ. ತಮ್ಮ ದಕ್ಷ ನಾಯಕತ್ವದಲ್ಲಿ ಸಂಘಟನೆಗೆ ಹೊಸ ವೇಗ, ಕಾರ್ಯಕರ್ತರಿಗೆ ಹೊಸ ಉತ್ಸಾಹ ಮೂಡಿದೆ ಎಂದು ತಿಳಿಸಿದ್ದಾರೆ.
ನಮ್ಮ ಎಲ್ಲ ಹಿರಿಯ ನಾಯಕರ ಬೆಂಬಲದೊಂದಿಗೆ, ದೇಶದ ಏಳಿಗೆಯ ಗುರಿಯೆಡೆಗೆ ಪಕ್ಷವನ್ನು ತಾವು ಸಮರ್ಥವಾಗಿ ಮುನ್ನಡೆಸುವ ವಿಶ್ವಾಸ ನಮ್ಮೆಲ್ಲರಿಗೆ ಇದೆ. ರಾಜ್ಯದ ಸಮಸ್ತ ಕಾರ್ಯಕರ್ತರ ಪರವಾಗಿ ತಮಗೆ ಹೆಮ್ಮೆಯ ಶುಭಹಾರೈಕೆಗಳು ಎಂದು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.
ಶುಭ ಕೋರಿದ ಕುಮಾರಸ್ವಾಮಿ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಿತಿನ್ ನಬಿನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಂಘಟನಾ ಚಾತುರ್ಯ, ರಾಜಕೀಯ ಅನುಭವ ಮತ್ತು ಶುದ್ಧ ಸಾರ್ವಜನಿಕ ಜೀವನದ ಬದ್ಧತೆಯು ಎನ್ಡಿಎ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ರಾಷ್ಟ್ರೀಯ ರಾಜಕಾರಣಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕ್ರಿಯಾತ್ಮಕ, ದೂರದೃಷ್ಟಿ ನಾಯಕತ್ವದಲ್ಲಿ ಎನ್ಡಿಎ ಕೂಟವು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಜನರ ಆಕಾಂಕ್ಷೆಗಳಿಗೆ ಕಟಿಬದ್ಧವಾಗಿರುವ ಬಲವಾದ ಮತ್ತು ಸ್ಥಿರ ಮೈತ್ರಿಕೂಟವಾಗಿ ರಾಷ್ಟ್ರ ರಾಜಕಾರಣದಲ್ಲಿ ಹೊರಹೊಮ್ಮಿದೆ ಈ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸುವಲ್ಲಿ, ಮಿತ್ರಪಕ್ಷಗಳ ಜೊತೆ ಹೆಚ್ಚಿನ ಸಮನ್ವಯವನ್ನು ಬೆಳೆಸುವಲ್ಲಿ ಮತ್ತು ವಿಕಸಿತ ಭಾರತ ಸಾಕಾರಕ್ಕಾಗಿ ನಮ್ಮ ಸಾಮೂಹಿಕ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ನಿತಿನ್ ನಬಿನ್ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
Related Articles
Thank you for your comment. It is awaiting moderation.


Comments (0)