ನಿಮಗಿದೋ ‘ಟೈಂ ಟೇಬಲ್‌’: ಜಯನಗರದಲ್ಲಿ ‘ಕಾಲ’ದ ವಿಜ್ಞಾನ ಲೋಕ!

ಬೆಂಗಳೂರು: ‘ಸಮಯ’ ಅಥವಾ ‘ಕಾಲ’ ಎನ್ನುವುದು ಕೇವಲ ಗಡಿಯಾರದ ಮುಳ್ಳುಗಳ ಆಟವಷ್ಟೇ ಅಲ್ಲ, ಅದೊಂದು ನಿಗೂಢ ವಿಸ್ಮಯ. ಇದೀಗ ಬೆಂಗಳೂರಿನ ಜಯನಗರದಲ್ಲಿರುವ ಲ’ಪಾರ್ಸೆಕ್‌'(ParSEC) ಅಕ್ಷರಶಃ ಒಂದು ‘ಟೈಮ್ ಲ್ಯಾಬ್’ (ಸಮಯದ ಪ್ರಯೋಗಾಲಯ) ಆಗಿ ಬದಲಾಗಿದೆ! ಪರಮ್‌ ಫೌಂಡೇಶನ್ ವತಿಯಿಂದ ಈ ಜನವರಿ ತಿಂಗಳು ಪೂರ್ತಿ ‘ಕಾಲ’ (Kala) ಎಂಬ ವಿಶಿಷ್ಟ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಮಕ್ಕಳು ಮತ್ತು ದೊಡ್ಡವರು ಸಮಯದ ಹಿಂದಿನ ವಿಜ್ಞಾನವನ್ನು ಆಟ-ಪಾಠದ ಮೂಲಕ ಕಲಿಯಬಹುದಾಗಿದೆ.

ಏನಿದು ಟೈಮ್‌ ಲ್ಯಾಬ್?:

ಇದು ಕೇವಲ ಬೋರ್ಡ್ ಮತ್ತು ಚಾಕ್ ಪೀಸ್ ಪಾಠವಲ್ಲ. ಇಲ್ಲಿ ಕಥೆಗಳು, ಪ್ರಯೋಗಗಳು ಮತ್ತು ಸ್ವತಃ ಕೈಯಾರೆ ಮಾಡುವು ಚಟುವಟಿಕೆಯ (DIY Models) ಮೂಲಕ ಸಮಯವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಿದೆ. ಪ್ರಾಚೀನ ಭಾರತದಲ್ಲಿ ನಕ್ಷತ್ರಗಳನ್ನು ನೋಡಿ ಹೇಗೆ ಸಮಯ ಹೇಳುತ್ತಿದ್ದರು? ನಮ್ಮ ದೇಹದೊಳಗಿನ ಜೈವಿಕ ಗಡಿಯಾರ (Biological Clock) ಹೇಗೆ ಕೆಲಸ ಮಾಡುತ್ತದೆ? ಎಂಬಿತ್ಯಾದಿ ಕುತೂಹಲಕರ ಸಂಗತಿಗಳನ್ನು ಇಲ್ಲಿ ಬಿಡಿಸಿಡಲಾಗುತ್ತದೆ.

ಎರಡು ವಯೋಮಿತಿಯವರಿಗೆ ಪ್ರತ್ಯೇಕ ಕಾರ್ಯಾಗಾರ:

ಈ ಕಾರ್ಯಾಗಾರವನ್ನು ವಯಸ್ಸಿನ ಆಧಾರದ ಮೇಲೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ:

1) 6 ರಿಂದ 13 ವರ್ಷದ ಮಕ್ಕಳಿಗೆ (ಬೆಳಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ):

ದಿ ಗ್ರೇಟ್ ಟೈಮ್ ಡಿಟೆಕ್ಟಿವ್ಸ್: ಗ್ರಹಗಳ ಚಲನೆ ಮತ್ತು ಅಣು ವಿಜ್ಞಾನದ ಮೂಲಕ ಸಮಯದ ರಹಸ್ಯ ಭೇದಿಸುವುದು. ಜೊತೆಗೆ ಪ್ರಾಚೀನ ಕಾಲದ ಗಡಿಯಾರಗಳ ನಿರ್ಮಾಣದ ಬಗ್ಗೆ ತಿಳಿಯಬಹುದು. (ದಿನಾಂಕ: ಜ. 3, 11, 17, 25).

ಟೈಮ್ ಹ್ಯಾಕರ್ಸ್: ರಟ್ಟಿನ ಡಬ್ಬಿಗಳನ್ನು ಬಳಸಿ ಮಕ್ಕಳು ತಮ್ಮದೇ ಆದ ‘ಸೂಪರ್ ಸ್ಟಾಪ್ ವಾಚ್’ ಮಾದರಿಯನ್ನು ತಯಾರಿಸಬಹುದು ಮತ್ತು ಟೈಮಿಂಗ್ ಚಾಲೆಂಜ್‌ಗಳಲ್ಲಿ ಭಾಗವಹಿಸಬಹುದು.

(ದಿನಾಂಕ: ಜ. 4, 10, 18, 24).

2) 13 ವರ್ಷ ಮೇಲ್ಪಟ್ಟವರಿಗೆ (ಮಧ್ಯಾಹ್ನ 3 ರಿಂದ ಸಂಜೆ 5ರವರೆಗೆ):

ಪ್ರಾಚೀನ ಕಾಲದ ಪರಿಕಲ್ಪನೆಗಳು: ಪ್ರಾಚೀನ ಭಾರತದಲ್ಲಿ ನಕ್ಷತ್ರಗಳು, ಪಂಚಾಂಗ ಮತ್ತು ಜೈವಿಕ ಲಯಗಳ ಮೂಲಕ ಸಮಯವನ್ನು ಹೇಗೆ ಅಳೆಯುತ್ತಿದ್ದರು ಎಂಬ ರೋಚಕ ಮಾಹಿತಿ.

(ದಿನಾಂಕ: ಜ. 3, 11, 17, 25).

ಸ್ಟಾಪ್ ವಾಚ್ ರಹಸ್ಯ: ಯಾಂತ್ರಿಕ ಮಾದರಿಯನ್ನು ನಿರ್ಮಿಸುವ ಮೂಲಕ ಸ್ಟಾಪ್ ವಾಚ್‌ನ ಸ್ಟಾರ್ಟ್, ಸ್ಟಾಪ್ ಮತ್ತು ರೀಸೆಟ್ ಬಟನ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಕಲಿಯಬಹುದು. (ದಿನಾಂಕ: ಜ. 4, 10, 18, 24).

ಈಗಲೇ ನೋಂದಾಯಿಸಿಕೊಳ್ಳಿ!:

ಈ ಕಾರ್ಯಾಗಾರಗಳು ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಮಾತ್ರ ನಡೆಯಲಿದೆ. ಭಾಗವಹಿಸುವವರು ತಾವು ತಯಾರಿಸಿದ ಮಾಡೆಲ್‌ಗಳನ್ನು (3D ಪ್ರಿಂಟೆಡ್ ಅಥವಾ ಇತರೆ) ಮನೆಗೆ ಕೊಂಡೊಯ್ಯಬಹುದು. ಈ ವಿಶೇಷ ಅನುಭವವು ಜನವರಿ 31ರವರೆಗೆ ಮಾತ್ರ ಲಭ್ಯವಿರುತ್ತದೆ. ಆಸಕ್ತರು ಬುಕ್‌ ಮೈ ಶೋದಲ್ಲಿ ನೋಂದಾಯಿಸಿಕೊಳ್ಳಬಹುದು. ಒಟ್ಟಿನಲ್ಲಿ ಮೊಬೈಲ್ ಸ್ಕ್ರೀನ್ ನೋಡಿ ಸಮಯ ಕಳೆಯುವ ಬದಲು, ಆ ಸಮಯದ ಹುಟ್ಟು ಮತ್ತು ಬೆಳವಣಿಗೆಯನ್ನು ತಿಳಿಯಲು ಇದೊಂದು ಸುವರ್ಣಾವಕಾಶ!

Related Articles

Comments (0)

Leave a Comment