Special Report-ಬೆಸ್ಕಾಂ ವಿದ್ಯುತ್‌ ಪರಿವರ್ತಕಗಳ ನಿರ್ವಹಣೆ ಮೆಲ್ವಿಚಾರಣೆಗೆ ಬಂತು ಆ್ಯಪ್

ಬೆಂಗಳೂರು:ಗ್ರಾಹಕರಿಗೆ ಗುಣಮಟ್ಟದ ಹಾಗೂ ತಡೆರಹಿತ ವಿದ್ಯುತ್‌ ಪೂರೈಸುವ ನಿಟ್ಟಿನಲ್ಲಿ ಬೆಸ್ಕಾಂ, ತನ್ನ ವ್ಯಾಪ್ತಿಯ 8 ಜಿಲ್ಲೆಗಳಲ್ಲಿನ 5 ಲಕ್ಷಕ್ಕೂ ಅಧಿಕ ವಿದ್ಯುತ್‌ ಪರಿವರ್ತಕಗಳ (ಟಿಸಿ) ಮುನ್ನೆಚ್ಚರಿಕಾ ನಿರ್ವಹಣೆಯನ್ನು  ಕ್ರಮಬದ್ಧವಾಗಿ ಮಾಡಲು ಹಾಗೂ ಅದರ ನಿರ್ವಹಣೆಯ ಮೇಲೆ ನಿಗಾವಹಿಸಲು ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಲೈಫ್ ಸೈಕಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ (ಡಿಟಿಎಲ್‌ಎಮ್‌ಎಸ್) ಆ್ಯಪ್ ಒಂದನ್ನು ಅಭಿವೃದ್ದಿ ಪಡಿಸಿದೆ.

ಗ್ರಾಹಕರಿಗೆ ತಡೆರಹಿತ ವಿದ್ಯುತ್‌ ಪೂರೈಸಲು ಅಡ್ಡಿಯಾಗಿರುವ ದೋಷಪೂರಿತ ಟಿಸಿಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಿ, ಅದರ ಕಾರ್ಯದಕ್ಷತೆಯನ್ನು ಹೆಚ್ಚಿಸಬೇಕೆಂಬ ಇಂಧನ ಸಚಿವ ಕೆ. ಜೆ. ಜಾರ್ಜ್‌ ಅವರ ಸೂಚನೆ ಮೇರೆಗೆ ಬೆಸ್ಕಾಂ ಟಿಸಿಗಳ ನಿರ್ವಹಣೆ ಮೇಲ್ಚಿಚಾರಣೆಗೆ ಪ್ರತ್ಯೇಕ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಡಿಟಿಎಲ್‌ಎಮ್‌ ಎಸ್‌ ಆ್ಯಪ್ ಅನ್ನು ಸಚಿವರು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, “ಬೆಸ್ಕಾಂ ವ್ಯಾಪ್ತಿಯಲ್ಲಿರುವ ವಿದ್ಯುತ್‌ ಪರಿವರ್ತಕಗಳ ಮುಂಜಾಗೃತ ನಿರ್ವಹಣೆಯ ಮೇಲ್ಚಿಚಾರಣೆಯನ್ನು ಆ್ಯಪ್ ಮೂಲಕ ನಿರ್ವಹಿಸುವುದರಿಂದ ಗ್ರಾಹಕರಿಗೆ ತಡೆರಹಿತ ಹಾಗೂ ಗುಣಮಟ್ಟದ ವಿದ್ಯುತ್‌  ಪೂರೈಸುವ ನಮ್ಮ ಉದ್ದೇಶ ಸಫಲವಾಗುತ್ತದೆ. ಟಿಸಿಗಳ ನಿರ್ವಹಣೆಯನ್ನು ನಿಯಮಿತವಾಗಿ ಮಾಡುವುದರಿಂದ ಅವುಗಳ ಜೀವಿತಾವಧಿ ಕೂಡ ವೃದ್ದಿಯಾಗುತ್ತದೆ” ಎಂದರು.

ಆ್ಯಪ್ ಕುರಿತು ವಿಸ್ತೃತವಾಗಿ ವಿವರಣೆ ನೀಡಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್.‌ ಶಿವಶಂಕರ, ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಟಿಸಿಗಳ ಕಾರ್ಯಚರಣೆ, ಮುಂಜಾಗೃತ ನಿರ್ವಹಣೆ, ದುರಸ್ಥಿ ಹಾಗೂ ದಕ್ಷತೆಯ ಮೇಲೆ ನಿರಂತರ ನಿಗಾ ಇರಿಸಬಹುದಾಗಿದೆ. ಟಿಸಿ ನಿರ್ವಹಣಾ ಕಾರ್ಯಗಳ  ಮಾಹಿತಿಯನ್ನು ಆಧಿಕಾರಿಗಳು ಆ್ಯಪ್ ನಲ್ಲಿ ನಮೂದಿಸಲು ಅನುವು ಮಾಡಿಕೊಡಲಾಗಿದೆ.

ಡಿಟಿಎಲ್‌ಎಮ್‌ಎಸ್‌ (ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಲೈಫ್ ಸೈಕಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್) ಅಡಿಯಲ್ಲಿ ಅಭಿವೃದ್ಧಿಪಡಿಸಿದ ಡಿಟಿಸಿ (ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಸೆಂಟರ್) ನಿರ್ವಹಣೆ ಮಾಡ್ಯೂಲ್ ವಿದ್ಯುತ್ ವಿತರಣಾ ವ್ಯವಸ್ಥೆಯ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ನಿರಂತರತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಈ ನಿರ್ವಹಣಾ ಮಾಡ್ಯೂಲ್ ಮೂಲಕ ಬೆಸ್ಕಾಂ ಕ್ಷೇತ್ರ ಅಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿರುವ ಎಲ್ಲಾ ಟ್ರಾನ್ಸ್‌ಫಾರ್ಮರ್‌ಗಳನ್ನು ತ್ರೈಮಾಸಿಕವಾಗಿ ನಿರ್ವಹಣೆ ಮಾಡಿ, ವಿದ್ಯುತ್‌ ವಿತರಣೆಯಲ್ಲಾಗುವ ಸೋರಿಕೆಯನ್ನು ತಡೆಗಟ್ಟಿ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್‌ ಪೂರೈಸಲು ಸಹಕಾರಿಯಾಗಲಿದೆ.ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯುತ್ ಸೇವೆಗಳನ್ನು ಸುಧಾರಿಸಲು ಮತ್ತು ಗ್ರಾಹಕರಿಗೆ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಇದು ಮಹತ್ವದ ಹೆಜ್ಜೆಯಾಗಿದೆ.ಟಿಸಿಗಳ ನಿರ್ವಹಣೆಯ ಮೊದಲು ಹಾಗೂ ನಿರ್ವಹಣೆಯ ನಂತರದ ಫೋಟೊಗಳನ್ನು ಕ್ಷೇತ್ರಾಧಿಕಾರಿಗಳು ಆ್ಯಪ್‌ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಇದರಿಂದಾಗಿ ವಿದ್ಯುತ್‌ ಪರಿವರ್ತಕಗಳ ಸಮರ್ಪಕ ನಿರ್ವಹಣೆ ಮಾಹಿತಿ ಜೊತೆಗೆ ಟಿಸಿ ಆವರಣದಲ್ಲಿರುವ ಕಸಕಡ್ಡಿಗಳನ್ನು ತೆರವು ಮಾಡಿ ಅವುಗಳನ್ನು ಸುರಕ್ಷಿತವಾಗಿಡಲು ನೆರವಾಗುತ್ತದೆ ಎಂದರು.

“ಡಿಟಿಎಲ್‌ಎಮ್‌ಎಸ್‌ ಆ್ಯಪ್ ಮೂಲಕ ವಿದ್ಯುತ್‌ ಪರಿವರ್ತಕಗಳ ತೈಮಾಸಿಕ ನಿರ್ವಹಣೆ, ದೋಷಗಳನ್ನು ದಾಖಲಿಸುವುದು, ದುರಸ್ತಿ ವಿವರಗಳು, ಸ್ಥಿತಿಯ ಮೇಲ್ವಿಚಾರಣೆ ಮತ್ತು ಇತಿಹಾಸ ಆಧಾರಿತ ವಿಶ್ಲೇಷಣೆಯನ್ನು ಡಿಜಿಟಲ್ ರೂಪದಲ್ಲಿ ಪರಿಣಾಮಕಾರಿಯಾಗಿ ಮಾಡಬಹುದಾಗಿದೆ. ಜೊತೆಗೆ ಕ್ಷೇತ್ರ ಮಟ್ಟದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಲು, ದೋಷನಿವಾರಣೆಯ ಸಮಯವನ್ನು ಕಡಿಮೆ ಮಾಡಲು ಮತ್ತು ಸಂಪನ್ಮೂಲಗಳ ಉತ್ತಮ ಬಳಕೆಗೆ ಸಹಾಯ ಮಾಡುತ್ತದೆ ” ಎಂದರು.

ಮುಖ್ಯ ಪ್ರಯೋಜನಗಳು:

* ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆ: ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ನಿಯಮಿತ ನಿರ್ವಹಣೆ ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಖಾತ್ರಿಗೊಳಿಸುತ್ತದೆ.

* ಕಾರ್ಯಕ್ಷಮತೆಯ ಮೇಲ್ವಿಚಾರಣೆ: ಪ್ರತಿ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಕಾರ್ಯಕ್ಷಮತೆಯ ಮಾಹಿತಿಯು ಡಿಟಿಎಲ್‌ಎಮ್‌ಎಸ್‌ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವುದರಿಂದ, ನಿರ್ವಹಣಾ ತಂಡವು ಡೇಟಾ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

*ವಿತರಣಾ ಪರಿವರ್ತಕದ ಜೀವಿತಾವಧಿ ವಿಸ್ತರಣೆ: ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಸಾಮಾನ್ಯ ಜೀವಿತಾವಧಿಯನ್ನು ಸರಿಯಾದ ಮತ್ತು ನಿಯಮಿತ ನಿರ್ವಹಣೆಯಿಂದ ವಿಸ್ತರಿಸಬಹುದು.

Related Articles

Comments (0)

Leave a Comment