ಬೆಂಗಳೂರಿನ ಹಲವೆಡೆ ಸೋಮವಾರ ವಿದ್ಯುತ್ ವ್ಯತ್ಯಯ
- by Suddi Team
- December 20, 2025
- 6 Views
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪ್ರೆಸ್ಟೀಜ್ ಫಾಲ್ಕಾನ್ ಸಿಟಿ ಉಪಕೇಂದ್ರ ವ್ಯಾಪ್ತಿಯಲ್ಲಿ ಸೋಮವಾರ( 22.12.2025) ಬೆಳಗ್ಗೆ 10:00 ಗಂಟೆಯಿಂದ ಸಂಜೆ 04:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಬೆಸ್ಕಾಂ,ಇಡೀ ದಿನ ವಿದ್ಯುತ್ ವ್ಯತ್ಯಯವಾಗುವ ಕಾರಣ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಮನವಿ ಮಾಡಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಪೋರಮ್ ಮಾಲ್, ಫ್ರೇಸ್ಟೀಜ್ ಪಾಲ್ಕಾನ್ ಸಿಟಿ ಅರ್ಟ್ಮೆಂಟ್, ದೊಡ್ಡಕಲ್ಲಸಂದ್ರ, ಕನಕಪುರ ಮೇನ್ ರೋಡ್, ನಾರಾಯಣ ನಗರ 3ನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜೋತಿ ಲೇಔಟ್, ಗಂಗಪತಿಪುರ, ಸುಪ್ರಜ ನಗರ, ಜೆಎಸ್ಎಸ್ ಶಾಲೆ ಸುತ್ತಮುತ್ತಲ ಪ್ರದೇಶಗಳು, ಕೋಣನಕುಂಟೆ ಸರ್ಕಾರಿ ಶಾಲೆ, ಜರಗನಹಳ್ಳಿ ರ್ಕ್, ಗಂಗಾಧರೇಶ್ವರ ದೇವಸ್ಥಾನ, ಬಸವರಾಜು ಲೇಔಟ್, ಶಾಂತಿ ಸ್ಹಾ ಮಿಲ್, ರಾಜೀವ್ ಗಾಂಧಿ ರಸ್ತೆ, ಸಾರಕ್ಕಿ ಕೆರೆ, ಸಾರಕ್ಕಿ ಸಿಗ್ನಲ್, ನಾಗಜು9ನ ಪ್ರೀಮಿಯರ್ ಅರ್ಟ್ಮೆಂಟ್, ಚುಂಚಗಟ್ಟ ವಿಲ್ಲೇಜ್, ಶ್ರೀನಿಧಿ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
Related Articles
Thank you for your comment. It is awaiting moderation.


Comments (0)