ಬೆಂಗಳೂರಿಂದ ಬಾಗಲಕೋಟೆಗೆ ಎಸಿ ಸ್ಲೀಪರ್ ಸೇವೆ ಪರಿಚಯಿಸಿದ ಕೆಎಸ್ಆರ್ಟಿಸಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು- ಬಾಗಲಕೋಟೆ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಗುಡ್ ನ್ಯೂಸ್ ನೀಡಿದ್ದು, ಹೊಸದಾಗಿ ಎ.ಸಿ ಸ್ಲೀಪರ್ ಬಸ್ ಸೇವೆಯನ್ನು ಪ್ರಾರಂಭಿಸುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗ, ಘಟಕ – 2ರಿಂದ ಬೆಂಗಳೂರು ಬಾಗಲಕೋಟೆ ನಡುವೆ ಹೊಸದಾಗಿ ಎ.ಸಿ. ಸ್ಟೀಪರ್ ಬಸ್‌ ಸೇವೆ ಪ್ರಾರಂಭಿಸಲಾಗುತ್ತಿದೆ.

ವೇಳಾಪಟ್ಟಿ :

ಬೆಂಗಳೂರಿನಿಂದ ಬಾಗಲಕೋಟೆಗೆ 09.00 pm- 05.15am

ಬಾಗಲಕೋಟೆಯಿಂದ ಬೆಂಗಳೂರಿಗೆ 09.00pm-05.15am

ಕಿಮೀ 498 (ಒಂದು ಕಡೆ)

ಟಿಕೆಟ್ ದರ:

ಬೆಂಗಳೂರು – ಹೊಸಪೇಟೆ: 900

ಬೆಂಗಳೂರು – ಕುಷ್ಟಗಿ: 1033

ಬೆಂಗಳೂರು – ಹುನಗುಂದ:1152

ಬೆಂಗಳೂರು – ಬಾಗಲಕೋಟೆ:1246

ಈ ಬಸ್ಸು ಬೆಂಗಳೂರಿನಿಂದ ಹೊರಟು ತುಮಕೂರು, ಚಿತ್ರದುರ್ಗ,ಹೊಸಪೇಟೆ,ಕುಷ್ಟಗಿ,ಇಳಕಲ್, ಹುನಗುಂದ ಮಾರ್ಗವಾಗಿ ಬಾಗಲಕೋಟೆಗೆ ತೆರಳಲಿದೆ.ಆನೈನ್ ಟಿಕೆಟ್ ಪಡೆಯಲು ksrtc.in ಗೆ ಭೇಟಿ ನೀಡಿ ಎಂದು ಕೆಎಸ್ಆರ್ಟಿಸಿ ಮನವಿ ಮಾಡಿದೆ.

Related Articles

Comments (0)

Leave a Comment