ಬೆಂಗಳೂರು-ಗದಗ ನಡುವೆ ನಾನ್ ಏ.ಸಿ ಸ್ವೀಪರ್ ಪಲ್ಲಕ್ಕಿ ಬಸ್ ಸೇವೆಗೆ ಕೆಎಸ್ಆರ್ಟಿಸಿ ಸಿದ್ದತೆ
- by Suddi Team
- October 13, 2025
- 13 Views

ಬೆಂಗಳೂರು: ಪ್ರಯಾಣಿಕರಿಂದ ಸಾಕಷ್ಟು ಬೇಡಿಕೆ ಪಡೆದುಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್ ಇದೀಗ ಬೆಂಗಳೂರು ಮತ್ತು ಗದಗ ನಡುವೆಯೂ ಕಾರ್ಯಾಚರಣೆಗೆ ಸಿದ್ದವಾಗಿದ್ದು ಗದಗ ಭಾಗದ ಪ್ರಯಾಣಿಕರಿಗೆ ಖುಷಿ ನೀಡಿದೆ.
ಬೆಂಗಳೂರು-ಗದಗ ನಡುವೆ ಹೊಸದಾಗಿ ಪಲ್ಲಕ್ಕಿ ನಾನ್ ಏ.ಸಿ ಸ್ವೀಪರ್ ಸಾರಿಗೆ ಸೇವೆಯನ್ನು ಪ್ರಾರಂಭ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿದ್ದತೆ ಮಾಡಿಕೊಂಡಿದ್ದು, ಅಕ್ಟೋಬರ್ 17 ರಿಂದ ಈ ಮಾರ್ಗದಲ್ಲಿ ಪಲ್ಲಕ್ಕಿ ಬಸ್ ಸಂಚಾರ ಆರಂಭಗೊಳ್ಳಲಿದೆ.
ಈ ಬಸ್ ಪ್ರತಿ ದಿನ ರಾತ್ರಿ 10.00 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹೊರಡಲಿದ್ದು,ಮರುದಿನ ಬೆಳಗ್ಗೆ 06.00 ಗಂಟೆಗೆ ಗದಗ ತಲುಪಲಿದೆ. ಅದೇ ದಿನ ರಾತ್ರಿ 10.00 ಗಂಟೆಗೆ ಗದಗದಿಂದ ಹೊರಟು ಮರುದಿನ ಬೆಳಗ್ಗೆ 06.00 ಗಂಟೆಗೆ ಬೆಂಗಳೂರು ತಲುಪಲಿದೆ.
ಈ ಬಸ್ ಬೆಂಗಳೂರಿನಿಂದ ಹೊರಟು ತುಮಕೂರು, ಚಿತ್ರದುರ್ಗ,ದಾವಣಗೆರೆ,ಹರಿಹರ,ರಾಣೆಬೆನ್ನೂರು,ಗುತ್ತಲ,ಶಿರಹಟ್ಟಿ ಮಾರ್ಗವಾಗಿ ಗದಗ ತಲುಪಲಿದ್ದು, ಪ್ರಯಾಣ ದರ ₹890 ರೂ. ನಿಗದಿಪಡಿಸಿದೆ.
Related Articles
Thank you for your comment. It is awaiting moderation.
Comments (0)