ಕಾವೇರಿ ಆರತಿ ವೀಕ್ಷಿಸುವವರಿಗೆ ಗುಡ್ ನ್ಯೂಸ್: ಟೋಲ್, ನಿಲುಗಡೆ ಶುಲ್ಕ, ಬೃಂದಾವನ ಪ್ರವೇಶ ಶುಲ್ಕ ಎಲ್ಲಾ ಫ್ರೀ
- by Suddi Team
- September 25, 2025
- 109 Views
ಮಂಡ್ಯ: ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 2 ರವರೆಗೆ ಕೆ.ಆರ್.ಎಸ್ ಬೃಂದಾವನಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ಟೋಲ್,ಪಾರ್ಕಿಂಗ್ ಹಾಗೂ ಬೃಂದಾವನ ವೀಕ್ಷಣೆಯ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ ಬಾಬು ಬಂಡಿಸಿದ್ದೇಗೌಡ ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 26 ರ ಶುಕ್ರವಾರ ಸಂಜೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ “ಕಾವೇರಿ ಆರತಿ” ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ.ಕಾರ್ಯಕ್ರಮದ ವೀಕ್ಷಣೆಗೆ ಪ್ರತಿ ನಿತ್ಯ 8 ರಿಂದ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ರಾಜ್ಯ, ಹೊರರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ನಿರೀಕ್ಷೆ ಇದ್ದು, ಬರುವ ಎಲ್ಲ ಸಾರ್ವಜನಿಕರಿಗೂ ಸರ್ಕಾರ ಟೋಲ್ ಶುಲ್ಕ,ಬೃಂದಾವನ ಪ್ರವೇಶ ಶುಲ್ಕ,ಪಾರ್ಕಿಂಗ್ ಶುಲ್ಕವನ್ನು ವಿಧಿಸದಿರುವ ನಿರ್ಧಾರ ಕೈಗೊಂಡಿದೆ.
Related Articles
Thank you for your comment. It is awaiting moderation.


Comments (0)