ಹುಟ್ಟಿದ ಮೂರು ಗಂಟೆಯಲ್ಲೇ ತಾಯಿಗೆ ಬೇಡವಾದ ಹೆಣ್ಣು ಶಿಶು!
- by Suddi Team
 - June 21, 2018
 - 105 Views
 
ಬೆಂಗಳೂರು: ಹುಟ್ಟಿದ ಮೂರ್ನಾಲ್ಕು ಗಂಟೆಯಲ್ಲಿ ನವಜಾತ ಹೆಣ್ಣು ಶಿಶುವನ್ನು ನಿರ್ದಯಿ ತಾಯಿಯೊಬ್ಬಳು ಮನೆಯೊಂದರ ಕಾಂಪೌಂಡ್ನಲ್ಲಿ ಬಿಸಾಡಿ ಹೋಗಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.
ಬಾಣಸವಾಡಿಯ ಸುಧಾ ಎಂಬುವವರ ಮನೆಯ ಕಾಪೌಂಡ್ ನಲ್ಲಿ ಶಿಶುವನ್ನು ಬಿಟ್ಟು ಹೋಗಿದ್ದು, ಸುಧಾ ಶಿಶುವನ್ನು ನೋಡಿದ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳೀಯರ ಸಹಾಯದಿಂದ ಶಿಶುವನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿರುವ ಪಾಪಿಗಳ ಬಗ್ಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸುತ್ತಮುತ್ತ ಏರಿಯಾಗಳ ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)