ಕೆಎಸ್ಆರ್ಟಿಸಿಗೆ ರಾಷ್ಟ್ರಮಟ್ಟದ ಅನ್ಲಾಕ್ಡ್,ಎಮ್ಯ್ಕೂಬ್,ಸ್ಕಾಚ್ ಪ್ರಶಸ್ತಿ ಗರಿ..!

ಬೆಂಗಳೂರು: ಅಶ್ವಮೇಧ,ಅಂಬಾರಿ ಉತ್ಸವ,ಐರಾವತ ಕ್ಲಬ್ ಕ್ಲಾಸ್ ಬಸ್ ಗಳ ಪುನಶ್ಚೇತನ,ಯುಪಿಐ ಪಾವತಿ ವ್ಯವಸ್ತೆ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಿತ ಕಾರ್ಯನಿರ್ವಹಣೆಗೆ ರಾಷ್ಟ್ರ ಮಟ್ಟದ  3 ಅನ್ಲಾಕ್ಡ್ ( Unlocked), 2 ಎಮ್ಕ್ಯೂಬ್( mCUBE)  ಮತ್ತು 1 ಸ್ಕಾಚ್  ಪ್ರಶಸ್ತಿಗಳು ಲಭಿಸಿವೆ.

ಅನ್ಲಾಕ್ಡ್ ಪ್ರಶಸ್ತಿಗಳು:

1. ಸಾರಿಗೆ ಸುರಕ್ಷಾ ಯೋಜನೆಯ ಪರಿಚಯಕ್ಕಾಗಿ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣೆ ಪ್ರಶಸ್ತಿ

2. ಅಶ್ವಮೇಧ ಕ್ಲಾಸಿಕ್ ಬಸ್ಗಳ ಪರಿಚಯಕ್ಕಾಗಿ ಅತ್ಯುತ್ತಮ ಹೊಸ ಉತ್ಪನ್ನ ಪ್ರಶಸ್ತಿ

3. ಡೈನಾಮಿಕ್ UPI ಮತ್ತು AWATAR ಪರಿಚಯಕ್ಕಾಗಿ ತಂತ್ರಜ್ಞಾನದ ಅತ್ಯುತ್ತಮ ಬಳಕೆ ಪ್ರಶಸ್ತಿ

ಎಮ್ಕ್ಯೂಬ್ ಪ್ರಶಸ್ತಿ ಗಳು :

1. ಅಂಬಾರಿ ಉತ್ಸವ ಬಸ್ಗಳ ಪರಿಚಯಕ್ಕಾಗಿ ವೀಡಿಯೊ ಮಾರ್ಕೆಟಿಂಗ್ ಅಭಿಯಾನದಲ್ಲಿ ಅತ್ಯುತ್ತಮ ವಿಷಯ ಪ್ರಶಸ್ತಿ

2. ಐರಾವತ್ ಕ್ಲಬ್ ಕ್ಲಾಸ್ ಬಸ್ಗಳ ಪುನಶ್ಚೇತನದ ಪರಿಚಯಕ್ಕಾಗಿ ಅತ್ಯುತ್ತಮ ಉತ್ಪನ್ನ ನಿಯೋಜನೆ ತಂತ್ರ ಪ್ರಶಸ್ತಿ

ಸೆಪ್ಟೆಂಬರ್ 19 ರಂದು Unlocked ಪ್ರಶಸ್ತಿ ಮತ್ತು mCUBE ಪ್ರಶಸ್ತಿಗಳನ್ನು ಗುರುಗ್ರಾಮದ ಆಡಿಟೋರಿಯಂ, ಡಿಎಲ್ಎಫ್ ಸೈಬರ್ ಪಾರ್ಕ್ ಹೋಟೇಲಿನಲ್ಲಿ ಡಾ. ಅಂಕೂರ್ ದಾಸ್ಗುಪ್ತ, ಮುಖ್ಯ ಅನುಭವ ಅಧಿಕಾರಿ, ಗ್ಯಾರೇಜ್ ಕಲೆಕ್ಟಿವ್ ಮತ್ತು  ಕಿಶೋರ್ ಅಚಾರಾ, ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕರು, ಬಿಎಂಸಿ ಹೆಲಿಕ್ಸ್ ರವರುಗಳು ಪ್ರದಾನ ಮಾಡಿದರು.

ನಿಗಮವು HRMS ತಂತ್ರಾಂಶವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 20 ರಂದು ನವದೆಹಲಿಯ ಸಿಲ್ವರ್ ಓಕ್ ಹಾಲ್, ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್ ಹೋಟೇಲಿನಲ್ಲಿ ಸ್ಕೋಚ್ 2025ನೇ ಸಾಲಿನ ಪ್ರಶಸ್ತಿಯನ್ನು ಡಾ. ಎಂ ರಾಮಚಂದ್ರನ್, ಮಾಜಿ ಕಾರ್ಯದರ್ಶಿ, ಭಾರತ ಸರ್ಕಾರ ಮತ್ತು ಸಮೀರ್ ಕೊಚಾರ್, ಅಧ್ಯಕ್ಷರು, ಸ್ಕೋಚ್ ಗ್ರೂಪ್ ರವರು ಪ್ರದಾನ ಮಾಡಿದರು.

ಎಲ್ಲಾ ಮೂರು ಪ್ರಶಸ್ತಿಗಳನ್ನು ನಿಗಮದ ಪರವಾಗಿ ಶಿವಾನಂದ ಎಂ ಕವಳಿಕಾಯಿ, ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ, ಕೇಂದ್ರ ಕಛೇರಿ, ಬೆಂಗಳೂರು ಮತ್ತು    ರಾಜೇಶ್ ಶೆಟ್ಟಿ, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು ವಿಭಾಗ ರವರು ಸ್ವೀಕರಿಸಿದ್ದಾರೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Comments (0)

Leave a Comment